ಭಾರತ, ಜುಲೈ 20 -- ಮಳೆಗಾಲದಲ್ಲಿ ನೀರಿನ ಗುಣಮಟ್ಟ ಹೆಚ್ಚಾಗಿ ಹದಗೆಡುತ್ತದೆ. ಅದಕ್ಕಾಗಿಯೇ ಸುರಕ್ಷಿತ ಕುಡಿಯುವ ನೀರನ್ನು ಆಯ್ಕೆ ಮಾಡುವುದು ಅವಶ್ಯ. ಆದರೆ ನೀವು ಸರಿಯಾದ ನೀರನ್ನು ಆರಿಸಿಕೊಳ್ಳುತ್ತಿದ್ದೀರಿ ಎಂದು ಹೇಗೆ ಖಚಿತಪಡಿಸಿಕೊಳ್ಳುತ್ತೀರಿ?

ದೆಹಲಿಯ ಸಿಕೆ ಬಿರ್ಲಾ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್ ವಿಭಾಗದ ಪ್ರಮುಖ ಸಲಹೆಗಾರ ಡಾ. ನರೇಂದ್ರ ಸಿಂಗ್ಲಾ ಅವರು ವಿವರಗಳನ್ನು ಬಹಿರಂಗಪಡಿಸಿದರು. ಉತ್ತಮ ಆರೋಗ್ಯಕ್ಕಾಗಿ ಸುರಕ್ಷಿತ ಕುಡಿಯುವ ನೀರನ್ನು ಆಯ್ಕೆ ಮಾಡುವುದು ಅತ್ಯಗತ್ಯ, ವಿಶೇಷವಾಗಿ ಕಳಪೆ ನೀರಿನ ಗುಣಮಟ್ಟ ಹೊಂದಿರುವ ಪ್ರದೇಶಗಳಲ್ಲಿ ಶುದ್ಧ ನೀರನ್ನು ಆಯ್ಕೆ ಮಾಡುವುದು ಅವಶ್ಯವಾಗುತ್ತದೆ. ಸ್ಥಳೀಯ ನೀರಿನ ಪರಿಸ್ಥಿತಿಗಳು, ಮಾಲಿನ್ಯಕಾರಕಗಳು ಮತ್ತು ಜೀವನಶೈಲಿಯ ಅಗತ್ಯಗಳನ್ನು ಆಧರಿಸಿ ಸರಿಯಾದ ಶುದ್ಧ ನೀರನ್ನು ಆಯ್ಕೆ ಮಾಡಲು ಅವರು ಸೂಚಿಸುತ್ತಾರೆ. ಕುದಿಸಿದ ನೀರು, ಫಿಲ್ಟರ್ ಮಾಡಿದ ನೀರು ಮತ್ತು ಬಾಟಲ್ ನೀರಿನ ನಡುವೆ ಯಾವುದನ್ನು ಆಯ್ಕೆ ಮಾಡಬೇಕೆಂದು ಅವರು ಹಲವಾರು ಸಲಹೆಗಳನ್ನು ನೀಡಿದರು.

ಸಾಧಕಗಳು: ಬ್...