Bengaluru, ಫೆಬ್ರವರಿ 26 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಮಂಗಳವಾರ ಫೆಬ್ರುವರಿ 25ರ ಸಂಚಿಕೆಯಲ್ಲಿ ತಾಂಡವ್ ಮತ್ತು ಶ್ರೇಷ್ಠಾ ಮದುವೆಯ ಸಂದರ್ಭದಲ್ಲಿ ಭಾಗ್ಯ ಅಲ್ಲಿಗೆ ಬಂದಿದ್ದು, ಮಹಾ ಪ್ರಸಂಗವೇ ನಡೆದಿದೆ. ಕಥಾನಾಯಕಿ ಭಾಗ್ಯ, ತನ್ನ ಗಂಡ ತಾಂಡವ್ ಕಟ್ಟಿರುವ ತಾಳಿಯನ್ನು ಕಿತ್ತು ತೆಗೆದು, ಅವನಿಗೇ ವಾಪಸ್ ಕೊಡಲು ಮುಂದಾಗಿದ್ದಾಳೆ. ಆದರೆ, ಅಲ್ಲಿಗೆ ಬಂದ ಭಾಗ್ಯ ತಾಯಿ, ಮಗಳು ಗಂಡ ಕಟ್ಟಿರುವ ತಾಳಿಯನ್ನು ತೆಗೆಯಲು ಒಪ್ಪಿಲ್ಲ. ಹೀಗಾಗಿ ಅವರಿಬ್ಬರ ನಡುವೆ ವಾಗ್ವಾದ ನಡೆದಿದೆ. ಆದರೆ ಕುಸುಮಾ ಮತ್ತು ಧರ್ಮರಾಜ್ ಭಾಗ್ಯ ಪರ ವಹಿಸಿ ಮಾತನಾಡಿದ್ದಾರೆ. ಪೂಜಾ ಕೂಡ ಭಾಗ್ಯಾಗೆ ಬೆಂಬಲ ನೀಡಿದ್ದಾಳೆ, ಭಾಗ್ಯ ತಂದೆಯೂ, ಮಗಳೇ, ಹೆದರಬೇಡ, ನಿನ್ನ ಜತೆ ನಾನಿದ್ದೇನೆ ಎಂದು ಹೇಳಿದ್ದಾರೆ.

ಇಲ್ಲಿಯವರೆಗೆ ಭಾಗ್ಯಳನ್ನು ನನ್ನ ಮೆಚ್ಚಿನ, ಮುದ್ದಿನ ಸೊಸೆ ಎಂದು ಕರೆಯುತ್ತಿದ್ದ ಕುಸುಮಾ, ನಾನು ಜವಾಬ್ದಾರಿಯುತ ಅತ್ತೆಯ ಸ್ಥಾನವನ್ನು ಕಳೆದುಕೊಂಡಿದ್ದೇನೆ, ಅತ್ತೆ ಎಂದು ಕರೆಸಿಕೊಳ್ಳುವ ಯಾವ ಯೋಗ್ಯತೆಯೂ ನನಗಿಲ್ಲ, ಹೀಗ...