Bangalore, ಮಾರ್ಚ್ 17 -- ಬೆಂಗಳೂರು: ಬೆಂಗಳೂರಿನಲ್ಲಿ ವಾರಾಂತ್ಯದಲ್ಲಿ ಹಲವು ಪ್ರದೇಶದಲ್ಲಿ ಕುಡಿದು ವಾಹನ ಚಲಾಯಿಸುವವರನ್ನು ತಪಾಸಣೆ ಮಾಡುವ ಪ್ರಕ್ರಿಯೆ ಈಗ ಚುರುಕುಗೊಂಡಿದೆ. ಮಹದೇವಪುರದ ಡ್ರಿಂಕ್ ಅಂಡ್ ಡ್ರೈವ್ ಚೆಕ್ ಪೋಸ್ಟ್ ನಲ್ಲಿ ಶನಿವಾರ ರಾತ್ರಿ ಯುವಕ ಮತ್ತು ಆತನ ಗೆಳತಿ ಸಂಚಾರ ಪೊಲೀಸ್ ಇನ್ಸ್ ಪೆಕ್ಟರ್ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಸರ್ಕಾರಿ ಅಧಿಕಾರಿಗೆ ಅಡ್ಡಿಪಡಿಸಿದ ಮತ್ತು ಹಲ್ಲೆ ನಡೆಸಿದ ಆರೋಪದ ಮೇಲೆ ಬ್ಯಾಂಕ್ ಉದ್ಯೋಗಿಗಳಾದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಿ.ನಾರಾಯಣಪುರ ನಿವಾಸಿಗಳಾದ ರಾಕೇಶ್ ಕುಮಾರ್ (35) ಮತ್ತು ಬೈಸಾಖಿ (30) ಪಾರ್ಟಿ ಮುಗಿಸಿಕೊಂಡು ಹಿಂದಿರುಗುತ್ತಿದ್ದಾಗ ಸಿಂಗಯ್ಯನಪಾಳ್ಯ ಮೆಟ್ರೋ ನಿಲ್ದಾಣದ ಬಳಿ ಸಂಚಾರ ಪೊಲೀಸ್ ಇನ್ಸ್‌ಪೆಕ್ಟರ್ ಅನಿತಾ ಕುಮಾರಿ ನೇತೃತ್ವದ ತಂಡ ಅವರನ್ನು ತಡೆದಿದೆ.

ರಾಕೇಶ್ ಅವರ ರಕ್ತದ ಆಲ್ಕೋಹಾಲ್ ಮಟ್ಟವು ಕಾನೂನುಬದ್ಧ ಮಿತಿಯನ್ನು ಮೀರಿ 133 ಮಿಲಿ / 100 ಮಿಲಿ ಇರುವುದು ಕಂಡುಬಂದಿದೆ. ಇದರ ನಂತರ, ಪ...