ಭಾರತ, ಮಾರ್ಚ್ 16 -- ಶ್ರೀ ಸುಬ್ರಹ್ಮಣ್ಯ ಯಂತ್ರದಿಂದ ಅನೇಕ ರೀತಿಯ ಉಪಯೋಗಗಳಿವೆ. ಜನ್ಮ ಕುಂಡಲಿಯಲ್ಲಿ ಕುಜ ದೋಷವಿದ್ದಲ್ಲಿ ಈ ಯಂತ್ರವನ್ನು ಪೂಜಿಸುವುದರಿಂದ ದೋಷ ನಿವಾರಣೆ ಅಗುತ್ತದೆ. ಕುಟುಂಬದಲ್ಲಿ ಸಹೋದರ ಅಥವಾ ಸಹೋದರಿಯರ ನಡುವೆ ಮನಸ್ತಾಪ ಅಥವಾ ಭಿನ್ನಾಭಿಪ್ರಾಯಗಳಿದ್ದಲ್ಲಿ ಯಂತ್ರವನ್ನು ಪೂಜಿಸುವುದರಿಂದ ಪರಸ್ಪರ ಪ್ರೀತಿ ವಿಶ್ವಾಸ ಬೆಳೆಯುತ್ತದೆ. ಇದರಿಂದ ಕುಟುಂಬದಲ್ಲಿ ಶಾಂತಿ ನೆಮ್ಮದಿಯ ವಾತಾವರಣ ನೆಲೆಸುತ್ತದೆ. ವಾಸಿಸುವ ಮನೆಯಲ್ಲಿ ವಾಸ್ತುವಿನ ದೋಷವಿದ್ದಾಗ ಈ ಯಂತ್ರವನ್ನು ಪೂಜಿಸುವುದು ಅತಿ ಮುಖ್ಯ. ಮನೆತನಕ್ಕೆ ಸಂಬಂಧಿಸಿದ ಭೂಮಿಯ ವಿಚಾರದಲ್ಲಿ ವಿವಾದ ಉಂಟಾದಾಗ ಈ ಯಂತ್ರವನ್ನು ಸ್ಥಾಪಿಸಿ ಪೂಜಿಸುವುದರಿಂದ ಸಮಸ್ಯೆಯು ಬಗೆಹರಿಯುತ್ತದೆ. ಜನ್ಮ ಕುಂಡಲಿಯಲ್ಲಿ ಕುಜನ ತೊಂದರೆಯಿಂದ ವಿವಾಹ ವಿಳಂಬವಾಗುತ್ತಿದ್ದಲ್ಲಿ ಈ ಯಂತ್ರವನ್ನು ಪೂಜಿಸುವುದರಿಂದ ವಿವಾಹವು ಶೀಘ್ರಗತಿಯಲ್ಲಿ ನಡೆಯುತ್ತದೆ. ಇದರಿಂದ ಪ್ರಾಣಿಗಳಿಂದ ಉಂಟಾಗಬಹುದಾದ ತೊಂದರೆಯು ದೂರವಾಗುತ್ತದೆ. ಉದರ ಸಂಬಂಧಿ ದೋಷಗಳು ದೂರವಾಗುತ್ತವೆ. ಮನೆಗೆ ಆಗಿರುವ ದೃ...