Bengaluru, ಜೂನ್ 10 -- ಕುಜದೋಷದ ಕಾರಣ ಉತ್ತಮ ಸಾಲಾವಳಿ ಇರುವ ವಿವಾಹಗಳು ಇಂದಿಗೂ ನಡೆಯದೆ ಹೋಗುತ್ತಿವೆ. ಆದರೆ ಕುಜದೋಷ ಇರುವ ಕುಂಡಲಿಯಲ್ಲಿ ಪರಿಹಾರವೂ ಇರುತ್ತದೆ. ಕುಜನು ಕೇವಲ ಪತಿಯನ್ನು ಸೂಚಿಸುವ ಗ್ರಹವಾಗಿಲ್ಲ. ಕುಜನಿಂದ ಭೂಮಿಯ ಬಗ್ಗೆ ತಿಳಿಯಬಹುದು. ಕೊನೆಯ ಸೋದರನ ಬಗ್ಗೆಯೂ ತಿಳಿಯಬಹುದು. ಒಂದು ಕುಟುಂಬದಲ್ಲಿ ಅಥವಾ ಬಂಧು ಬಳಗದಲ್ಲಿ ಇಲ್ಲವೆ ನೆರೆ ಹೊರೆಯವರ ಜೊತೆ ಉಂಟಾಗಬಹುದಾದ ವಾದ ವಿವಾದ ಮತ್ತು ಮನಸ್ತಾಪಗಳನ್ನು ಸಹ ಕುಜನಿಂದ ತಿಳಿಯಬಹುದು. ಕುಟುಂಬದಲ್ಲಿ ಉಂಟಾಗಬಹುದಾದ ಬೆಂಕಿ ಅಥವಾ ಲೋಹದ ವಸ್ತುವಿನಿಂದಾಗುವ ಅವಘಡಗಳನ್ನು ಸಹ ಕುಜನಿಂದ ತಿಳಿಯಬಹುದು. ಆದ್ದರಿಂದ ಕೇವಲ ಕುಜದೋಷದ ಕಾರಣ ವಿವಾಹಕಾರ್ಯದಲ್ಲಿ ತೊಂದರೆ ಉಂಟಾಗಬಾರದು. ಸಮಾಜದ ಒಂದು ದುರಂತ ಎಂದರೆ " ಕುಜದೋಷದ ವಿಚಾರ "ವನ್ನು ತಪ್ಪಾಗಿ ಅರ್ಥೈಸಿಕೊಂಡಿರುವುದು. ಕುಜದೋಷ ಇದ್ದಲ್ಲಿ ವರ ಅಥವಾ ವಧುವಿನ ಮರಣವಾಗುತ್ತದೆ ಎಂದು ತಪ್ಪಾಗಿ ಕಲ್ಪಿಸಿಕೊಂಡಿದ್ದೇವೆ.

Published by HT Digital Content Services with permission from HT Kannada....