ಭಾರತ, ಮಾರ್ಚ್ 21 -- Shravani Subramanya Kannada Serial: ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮಾರ್ಚ್ 20ರ ಸಂಚಿಕೆಯಲ್ಲಿ ದೇವರ ಪೂಜೆಗೆಂದು ಗರ್ಭಗುಡಿ ಬಳಿ ಹೋಗುವ ವಿಶಾಲಾಕ್ಷಿ ಬಳಿ ಮಗನ ಬಗ್ಗೆ ವಿಚಾರಿಸುತ್ತಾರೆ ಪುರೋಹಿತರು. ಆದರೆ 'ಮಗ ನಮ್ಮಿಂದ ದೂರಾಗಿದ್ದಾನೆ' ಅಂತ ಹೇಳುತ್ತಾರೆ ವಿಶಾಲಾಕ್ಷಿ, ಅಷ್ಟೊತ್ತಿಗೆ ಆ ಕಡೆಯಿಂದ ಬರುವ ಸುಬ್ಬು 'ಪುರೋಹಿತರೇ ನಾನೆಲ್ಲೂ ಹೋಗಿಲ್ಲ.ಅಮ್ಮನನ್ನು ಬಿಟ್ಟು ನಾನು ಎಲ್ಲಿಗೂ ಹೋಗೋದು ಇಲ್ಲ. ನಾನು ಜೀವ ಇರುವವರೆಗೂ ಅಮ್ಮನ ಜೊತೆಗೆ, ಅವರನ್ನು ಹಿಂಬಾಲಿಸಿಕೊಂಡೇ ಇರ್ತೀನಿ' ಅಂತ ಹೇಳ್ತಾ ಗರ್ಭಗುಡಿ ಮುಂದೆ ಬಂದು ನಿಲ್ತಾನೆ. ಸುಬ್ಬು ಮಾತು ಕೇಳಿ ವಿಶಾಲಾಕ್ಷಿ ಹೃದಯ ಚುರ್ ಅಂದ್ರೂ ಆಕೆ ಬಿಗುಮಾನ ಬಿಡದೇ ನಿಂತಿರುತ್ತಾಳೆ. ಪೂಜೆ ಮುಗಿಸಿ ದೇವಸ್ಥಾನದಿಂದ ಹೊರಗೆ ಬಂದಾಗ ವಿಶಾಲಾಕ್ಷಿಯನ್ನು ಕರೆಯುವ ಸುಬ್ಬು 'ಅಮ್ಮ ಮಾತನಾಡಮ್ಮ, ನೀನು ಇಷ್ಟು ಕೋಪ ಮಾಡಿಕೊಳ್ಳುವಂತಹ ತಪ್ಪು ನಾವೇನೂ ಮಾಡಿಲ್ಲ ಅಮ್ಮ, ದಯವಿಟ್ಟು ನನ್ನ ಅರ್ಥ ಮಾಡ್ಕೋ, ನಿನ್ನ ಜೊತೆ ಮಾತಾಡಿಲ್ಲ ಅಂದ್ರೆ ಬದುಕಿದ್ದು ವೇಸ...