ಭಾರತ, ಮಾರ್ಚ್ 19 -- Shravani Subramanya Kannada Serial: ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮಾರ್ಚ್ 18ರ ಸಂಚಿಕೆಯಲ್ಲಿ ಅಳುತ್ತಲೇ ಗಂಡನ ಮುಂದೆ ಬರುವ ವಿಶಾಲಾಕ್ಷಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಒಬ್ಬರೇ ಹೋಗಿ ಹರಕೆ ತೀರಿಸಿ ಬರುತ್ತೇನೆ ಎಂದು ಹೊರಡುತ್ತಾನೆ. ಸ್ನಾನ ಮಾಡಿ ಹೊಸ ಬಟ್ಟೆ ತೊಟ್ಟು ಪೂಜೆ ಮಾಡಿ ಬ್ಯಾಗ್ ಹಿಡಿದು ಹೊರಟ ವಿಶಾಲಾಕ್ಷಿ ನೋಡಿ ಎಲ್ಲಿಗೆ ಹೋಗುತ್ತಿರಬಹುದು ಎಂದು ತಲೆ ಕೆಡಿಸಿಕೊಳ್ಳುತ್ತಾರೆ ಕಾಂತಮ್ಮ-ಸುಂದರ. ಅವರಿಗೆ ಆಕೆ ಒಬ್ಬಳೇ ಕುಕ್ಕೆಗೆ ಹೋಗುತ್ತಿದ್ದಾಳೆ ಎಂಬ ವಿಷಯ ಅರಿವಾಗುತ್ತದೆ. ಕೆಲ ಹೊತ್ತಿಗೆ ಸುಬ್ಬು ಕೂಡ ಬ್ಯಾಗ್ ಹಿಡಿದು ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೊರಡುತ್ತಾನೆ. ಆದರೆ ಅಮ್ಮ ಹೋಗುವ ವಿಚಾರ ಮಗನಿಗೆ ಮಗ ಹೋಗುವ ವಿಚಾರ ಅಮ್ಮನಿಗೆ ತಿಳಿದಿರುವುದಿಲ್ಲ.

ವರಲಕ್ಷ್ಮೀಗೆ ಶ್ರಾವಣಿ ಬಗ್ಗೆ ಹೇಳಿ ತಲೆ ಕೆಡಿಸಲು ನೋಡಿದ ಶ್ರೀವಲ್ಲಿ ಆ ವಿಚಾರದಲ್ಲಿ ಸೋಲುತ್ತಾಳೆ. ವರಲಕ್ಷ್ಮೀ ಶ್ರಾವಣಿ ಬಗ್ಗೆ ಒಳ್ಳೆಯ ಮಾತುಗಳನ್ನೇ ಹೇಳುತ್ತಾಳೆ. ಆಗ ಶ್ರೀವಲ್ಲಿ ವಿಜಯಾಂಬಿಕಾ ಕಾಲ್ ಮಾಡುತ್ತಾಳೆ. ತಾ...