ಭಾರತ, ಮಾರ್ಚ್ 6 -- ನ್ನೂ ಓದಿಕುಂಭ ರಾಶಿಯ ಯುಗಾದಿ ವರ್ಷ ಭವಿಷ್ಯ: ನೀವು ಧನಿಷ್ಠ ನಕ್ಷತ್ರದ 3 ಮತ್ತು 4ನೇ ಪಾದ, ಶತಭಿಷ ನಕ್ಷತ್ರದ 1,2,3 ಮತ್ತು 4ನೇ ಪಾದಗಳು, ಪೂರ್ವಭಾದ್ರ ನಕ್ಷದ 1, 2ನೇ ಪಾದದಲ್ಲಿ ಜನಿಸಿದ್ದಲ್ಲಿ ನಿಮ್ಮದು ಕುಂಭ ರಾಶಿ ಆಗುತ್ತದೆ. ನಿಮ್ಮ ಹೆಸರಿನ ಮೊದಲ ಅಕ್ಷರವು ಗು ಅಥವಾ ಗೆ ಆದಲ್ಲಿ ಧನಿಷ್ಠ ನಕ್ಷತ್ರ ಗೊ, ಸ, ಸಿ ಅಥವಾ ಸು ಆದಲ್ಲಿ ಶತಭಿಷ ನಕ್ಷತ್ರ ಹಾಗು ಸೊ, ದ ಅಥವಾ ದಿ ಆದಲ್ಲಿ ಪೂರ್ವಾಭಾದ್ರ ನಕ್ಷತ್ರ ಹಾಗೂ ಕುಂಭ ರಾಶಿ ಆಗುತ್ತದೆ. ಅದ್ಭುತ ಸ್ಮರಣಶಕ್ತಿ ಹೊಂದಿರುವ ಕುಂಭರಾಶಿಯವರು ಎಲ್ಲರೊಂದಿಗೂ ವಿವೇಕದಿಂದ ವರ್ತಿಸುತ್ತಾರೆ. ಯಾರಿಗೂ ಮೋಸ ಮಾಡುವ ಉದ್ದೇಶ ಇರುವುದಿಲ್ಲ. ಇತರರಿಂದ ಮಾನಸಿಕ ಬೆಂಬಲವನ್ನು ನಿರೀಕ್ಷಿಸುತ್ತಾರೆ. ವಿಶಿಷ್ಟ ರೀತಿಯಲ್ಲಿ ಜೀವನ ನಡೆಸುವ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಇವರಿಂದ ಕಲಿಯಬೇಕಾದ್ದು ಸಾಕಷ್ಟಿರುತ್ತದೆ.

ಕುಂಭ ರಾಶಿಯಲ್ಲಿ ಜನಿಸಿದ ಮಹಿಳೆಯರಿಗೆ ನಿಗೂಢ ಮನಸ್ಸು ಇರುತ್ತದೆ. ಕುತೂಹಲಕಾರಿ ವಿಚಾರಗಳನ್ನು ಸುಲಭವಾಗಿ ತಿಳಿದುಕೊಳ್ಳುತ್ತಾರೆ. ಇವರು ಇರುವ ...