ಭಾರತ, ಫೆಬ್ರವರಿ 11 -- ಇಂದು (ಫೆಬ್ರವರಿ 11, ಮಂಗಳವಾರ ಬುಧ ಗ್ರಹವು ಕುಂಭರಾಶಿಯನ್ನು ಪ್ರವೇಶಿಸಿ, ಇದೇ ತಿಂಗಳ 27ರವರೆಗು ಶನಿಗ್ರಹದೊಂದಿಗೆ ಸಂಚರಿಸುತ್ತಾನೆ. ಶನಿ ಮತ್ತು ಬುಧ ಗ್ರಹಗಳು ಪರಸ್ಪರ ಮಿತ್ರರಾಗುತ್ತಾರೆ. ಶನಿಯು ಮೂಲ ತ್ರಿಕೋಣದಲ್ಲಿದ್ದರೆ, ಬುಧನಿಗೆ ಕುಂಭವು ಮಿತ್ರ ಕ್ಷೇತ್ರವಾಗುತ್ತದೆ. ಇದರಿಂದ ಪ್ರತಿಯೊಂದು ರಾಶಿಗಳಿಗೆ ವಿಭಿನ್ನವಾದ ಫಲಗಳು ದೊರೆಯುತ್ತವೆ. ಬಹುತೇಕ ಶುಭಫಲಗಳು ದೊರೆಯುತ್ತವೆ. ಕುಂಭ ರಾಶಿಯಲ್ಲಿ ಶನಿ ಮತ್ತು ಬುಧನ ಸಂಯೋಗವು ಸಿಂಹ, ಕನ್ಯಾ, ತುಲಾ ಹಾಗೂ ವೃಶ್ಚಿಕ ರಾಶಿಯವರಿಗೆ ಇರುವ ಪ್ರಯೋಜನಗಳನ್ನು ತಿಳಿಯೋಣ.

ಬಂಧು ಬಳಗದವರ ಜೊತೆ ಉತ್ತಮ ಆತ್ಮೀಯತೆ ಮೂಡುತ್ತದೆ. ನಿಮ್ಮ ಕೆಲಸ ಕಾರ್ಯಗಳಿಗೆ ಎಲ್ಲರ ಸಹಾಯ ಸಹಕಾರ ದೊರೆಯುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಸಾಧಾರಣ ಪ್ರಗತಿ ಕಂಡು ಬರುತ್ತದೆ. ಸಣ್ಣ ಪ್ರಮಾಣದ ಕೆಲಸ ಕಾರ್ಯಗಳಿಗೂ ಹೆಚ್ಚಿನ ಪ್ರಯತ್ನದ ಅಗತ್ಯವಿದೆ. ಅಧಿಕವಾದ ಆತ್ಮವಿಶ್ವಾಸವಿರುತ್ತದೆ. ಸುಲಭವಾಗಿ ಬೇರೆಯವರ ಸಲಹೆ ಸೂಚನೆಯನ್ನು ಒಪ್ಪುವುದಿಲ್ಲ. ತಂದೆಯವರಿಗೆ ವಂಶದ ಆದಾಯದಲ್ಲಿ...