ಭಾರತ, ಫೆಬ್ರವರಿ 9 -- ಫೆ 12 ರಂದು ರಾತ್ರಿ ಸುಮಾರು 9 ಗಂಟೆಗೆ ಸೂರ್ಯನು ಮಕರ ರಾಶಿಯಿಂದ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಮಾರ್ಚ್ ತಿಂಗಳ 14 ರವರೆಗೂ ಕುಂಭರಾಶಿಯಲ್ಲಿ ಸಂಚರಿಸುತ್ತಾನೆ. ಕುಂಭ ರಾಶಿಯ ಅಧಿಪತಿಯು ಶನಿ. ಶನಿಗೆ ಈ ರಾಶಿಯು ಸ್ವಕ್ಷೇತ್ರ ಮತ್ತು ಮೂಲತ್ರಿಕೋನ ರಾಶಿಯಾಗುತ್ತದೆ. ರವಿ ಮತ್ತು ಶನಿ ಗ್ರಹಗಳು ಪರಸ್ಪರ ಶತ್ರುಗಳಾಗುತ್ತಾರೆ. ರವಿಯನ್ನು ರಾಜಗ್ರಹ ಎಂದು ಕರೆಯುತ್ತೇವೆ. ಅಂದರೆ ರವಿಯು ಉನ್ನತ ಮಟ್ಟದಲ್ಲಿರುವ ಅಧಿಕಾರಿಗಳನ್ನು ಸೂಚಿಸುತ್ತದೆ. ಒಂದು ಕುಟುಂಬದ ಹಿರಿಯ ವ್ಯಕ್ತಿಯನ್ನು ಸೂಚಿಸುತ್ತಾನೆ. ಸಮಾಜದ ಗಣ್ಯವ್ಯಕ್ತಿಗಳನ್ನು ಸಹ ರವಿಯಿಂದ ತಿಳಿಯಬಹುದು. ಆದರೆ ಶನಿಯು ಕುಂಭದಲ್ಲಿ ಇರುವ ಕಾರಣ ರವಿಗಿಂತಲೂ ಶನಿಯ ಶಕ್ತಿಯೇ ಹೆಚ್ಚಾಗುತ್ತದೆ. ಅಂದರೆ ಕುಂಭದಲ್ಲಿ ರವಿ ಚಲಿಸುತ್ತಿರುವವರೆಗೂ ಹಿರಿಯ ಅಧಿಕಾರಿಗಳು, ಮನೆಗೆ ಹಿರಿಯರು, ತಂದೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ತೊಂದರೆಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಉತ್ತಮ ಅವಕಾಶ ಮತ್ತು ಉತ್ತಮ ಪ್ರಯತ್ನಗಳ ನಡುವೆಯೂ ಆರಂಭಿಸುವ ಕೆಲಸ ಕಾರ...