Bengaluru, ಮೇ 2 -- ಪ್ರತಿಯೊಂದು ಗ್ರಹಗಳು ಪ್ರದಕ್ಷಿಣೆಯ ಮಾರ್ಗದಲ್ಲಿ ಚಲಿಸುತ್ತವೆ. ಆದರೆ ರಾಹು ಮತ್ತು ಕೇತುಗಳು ಅಪ್ರದಕ್ಷಿಣೆಯ ಮಾರ್ಗದಲ್ಲಿ ಸಂಚರಿಸುತ್ತದೆ. ರಾಹು ಮತ್ತು ಕೇತುಗಳನ್ನು ಛಾಯಾಗ್ರಹಗಳೆಂದು ಕರೆಯುತ್ತೇವೆ. ರಾಹು ತಾನಿರುವ ಕ್ಷೇತ್ರವನ್ನು ಕಾಪಾಡಿಕೊಳ್ಳುತ್ತಾನೆ. ಆದರೆ ರಾಹುವು ದೃಷ್ಟಿಸುವ ಭಾವಗಳನ್ನು ತೊಂದರೆಗೆ ಒಳಗಾಗುತ್ತವೆ. ರಾಹುವು 2025 ರ ಮೇ 18ರ ಭಾನುವಾರ ಮೀನ ರಾಶಿಯಿಂದ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. 2026 ರ ನವಂಬರ್ ತಿಂಗಳ 25 ಬುಧವಾರದಂದು ರಾಹುವು ಕುಂಭರಾಶಿಯಿಂದ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಯಾವುದೇ ಗ್ರಹಗಳ ಫಲಾಫಲಗಳು ಜನ್ಮಕುಂಡಲಿಯಲ್ಲಿನ ದಶಾಭುಕ್ತಿಗಳನ್ನು ಅವಲಂಭಿಸುತ್ತವೆ. ರಾಹು ಎಂದ ಮಾತ್ರಕ್ಕೆ ಭಯ ಪಡಬಾರದು. ಜೋತಿಷ್ಯದ ಪುಸ್ತಕಗಳಲ್ಲಿ ಒಳಿತು ಮತ್ತು ಕೆಡುಕುಗಳು ಎರಡನ್ನೂ ನೀಡಿರುತ್ತಾರೆ.

ರಾಹುವಿರುವ ರಾಶಿ, ರಾಹುವಿನ ಜೊತೆ ಇರುವ ಗ್ರಹಗಳು ಮತ್ತು ರಾಹುವನ್ನು ದೃಷ್ಟಿಸುವ ಗ್ರಹಗಳನ್ನು ಪರಿಶೀಲಿಸಬೇಕು. ಸುಲಭವಾದ ಪರಿಹಾರದಿಂದಲೂ ಶುಭಫಲಗಳನ್ನು ಪಡೆಯಬಹುದ...