ಭಾರತ, ಜನವರಿ 31 -- ತನ್ನ ಸಹಜ ಸೌಂದರ್ಯದಿಂದಲೇ ಕುಂಭಮೇಳದಲ್ಲಿ ಸಾಕಷ್ಟು ಜನರ ಮನಗೆದ್ದ ಹುಡುಗಿ ಮೋನಾಲಿಸಾ. ಅಷ್ಟೇ ಅಲ್ಲ ಸಾಮಾಜಿಕ ಜಾಲತಾಣದಲ್ಲಿ ಇವಳ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಈ ಮೂಲಕ ಸಾಕಷ್ಟು ಜನರನ್ನು ತಲುಪಿದ ಮೋನಾಲಿಸಾಳಿಗೆ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಸಿಗಲಿದೆ ಎಂಬ ಸುದ್ದಿ ಇತ್ತು. ಆದರೆ ಈಗ 'ದಿ ಡೈರಿ ಆಫ್ ವೆಸ್ಟ್ ಬೆಂಗಾಲ್'ನಲ್ಲಿ ಮೋನಾಲಿಸಾ ಅಭಿನಯಿಸಲಿದ್ದಾಳೆ ಎಂಬ ಅಧಿಕೃತ ಮಾಹಿತಿ ಲಭ್ಯವಾಗಿದೆ. ಸಿನಿಮಾ ನಿರ್ಮಾಪಕ ಸನೋಜ್ ಮಿಶ್ರಾ ಮೋನಾಸಿಲಾಳ ಮನೆಗೆ ಹೋಗಿ ಅಲ್ಲಿಂದಲೇ ವಿಡಿಯೋ ಮೂಲಕ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಚಲನಚಿತ್ರ ನಿರ್ಮಾಪಕ ಸನೋಜ್ ಮಿಶ್ರಾ ಅವರು ಬಾಲಿವುಡ್ ಚಲನಚಿತ್ರದಲ್ಲಿ ಅಭಿನಯಿಸಲು ಮೋನಾಲಿಸಾಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಸಾಮಾಜಿಕ ಮಾಧ್ಯಮದ ವೀಡಿಯೊದ ಮೂಲಕ ಕೆಲ ವಿಚಾರಗಳನ್ನು ಹಂಚಿಕೊಂಡಿದ್ಧಾರೆ. ಮೋನಾಲಿಸಾಳನ್ನು ಭೇಟಿಯಾಗಬೇಕು ಎಂದು ಅವರು ಪ್ರಯಾಗ್‌ ರಾಜ್‌ಗೆ ಹೋಗಿದ್ದರಂತೆ, ಆದರೆ ಆಕೆ ಅಲ್ಲಿಂದ ತನ್ನ ಊರಿಗೆ ಬಂದಿದ್ದಳು ಎಂಬ ವಿಚಾರ ಗೊತ್ತಾಗಿ ಆಕೆಯ ಊರಾದ...