Bengaluru, ಜೂನ್ 5 -- ಹೆಸರೆ ಸೂಚಿಸುವುದಂತೆ ಈ ದೇವಾಲಯವು ಶಿವನಿಗೆ ಸಂಬಂಧಿಸಿದೆ. ಶಿವನು ಲಯಕರ್ತ. ತನ್ನ ಮೂರನೆಯ ಕಣ್ಣಿನಲ್ಲಿ ಬೆಂಕಿಯನ್ನೇ ಹೊಂದಿದ್ದಾನೆ. ಆದ್ದರಿಂದ ಶಿವನಿಗೆ ಅಗ್ನೀಶ್ವರ ಸ್ವಾಮಿ ಎಂಬ ಹೆಸರು ಇರುವ ಬಗ್ಗೆ ಗ್ರಂಥಗಳಲ್ಲಿ ಉಲ್ಲೇಖಿತವಾಗಿದೆ. ಅಗ್ನೀಶ್ವರಸ್ವಾಮಿ ದೇವಾಲಯವು ತಮಿಳುನಾಡಿನಲ್ಲಿದೆ. ಕುಂಬಕೋಣಂ ಬಳಿ ಇರುವ ಕಂಜನೂರ್ ಗ್ರಾಮದಲ್ಲಿ ಈ ದೇವಾಲಯವಿದೆ. ಈ ದೇವಾಲಯವು ಶುಕ್ರನಿಗೆ ಸಂಬಂಧಿಸಿದರೂ ಶಿವನು ಪ್ರಧಾನ ದೇವತೆ ಆಗಿದ್ದಾನೆ. ಶಿವನು ಜಗತ್ತಿನ ಎಲ್ಲೆಡೆ ಇದ್ದಾನೆ ಎಂಬ ನಂಬಿಕೆ ಇದೆ. ಆದ್ದರಿಂದಲೇ ಶಿವನನ್ನು ಸರ್ವವ್ಯಾಪಿ ಎಂದು ಕರೆಯುತ್ತೇವೆ. ಈ ದೇವಾಲಯವನ್ನು ಮಧ್ಯಕಾಲೀನ ಚೋಳರು ನಿರ್ಮಿಸಿದ್ದಾರೆ. ಆ ನಂತರ ವಿಜಯನಗರದ ರಾಜರು ಇದರ ಜೀರ್ಣೋದ್ದಾರ ಮಾಡಿ ನವೀಕರಣ ಮಾಡಿದ್ದಾರೆ. ಈ ದೇವಾಲಯದಲ್ಲಿ ಐದು ಹಂತದಲ್ಲಿ ನಿರ್ಮಿಸಿರುವ ರಾಜಗೋಪುರ ಇದೆ. ಈ ದೇವಾಲಯದಲ್ಲಿ ಪುರಾಣಕ್ಕೆ ಸಂಬಂಧಿಸಿದ ಪೌರಾಣಿಕ ಕತೆ ಇದೆ.

ಪರಾಶರ ಮಹರ್ಷಿಗೆ ಶುಕ್ರನ ದೋಷ ಉಂಟಾಗುತ್ತದೆ. ಶಿವನ ಪರಮಭಕ್ತರಾದ ಪರಾಶರ ಮಹರ್ಷಿಗ...