ಭಾರತ, ಮಾರ್ಚ್ 17 -- ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರು ಬೆಳೆಯುತ್ತಿದ್ದು, ಮೂಲಸೌಕರ್ಯಗಳ ಕೊರತೆ ಕಾಡುತ್ತಿದೆ. ಈ ವಿಚಾರ ಪದೇಪದೆ ಬೇರೆಬೇರೆ ಸಂದರ್ಭಗಳಲ್ಲಿ ಗಮನಸೆಳೆಯುತ್ತಿರುತ್ತದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಬೆಂಗಳೂರಿನಲ್ಲಿ ಕಾಂಕ್ರೀಟ್ ಕಟ್ಟಡಗಳು ಕಿಕ್ಕಿರಿದು ತುಂಬಿಕೊಂಡ ದೃಶ್ಯವಿದ್ದು ಮತ್ತೆ ಅನೇಕ ವಿಚಾರಗಳನ್ನು ನೆನಪಿಸಿ ಚರ್ಚೆಗೆ ಗ್ರಾಸ ಒದಗಿಸಿದೆ. ಕ್ಷಿಪ್ರವಾಗಿ ಬೆಳವಣಿಗೆ ಕಾಣುತ್ತಿರುವ ಬೆಂಗಳೂರು ನಗರದ ಮೂಲಸೌಕರ್ಯ ವಿಚಾರ, ನಶಿಸುತ್ತಿರುವ ಹಸಿರು ಪ್ರದೇಶ ಕಳವಳ ಮೂಡಿಸಿದೆ.

ಬೆಂಗಳೂರಿನ ಈ ವೈರಲ್ ವಿಡಿಯೋದಲ್ಲಿ ನಂದಿನಿ ಲೇಔಟ್‌ನ ದೃಶ್ಯವಿದ್ದು, ಎಕ್ಸ್‌ ತಾಣದಲ್ಲಿ ಶೇರ್ ಆಗಿದೆ. ಅದರಲ್ಲಿ ಬೆಂಗಳೂರಿನ ಹೃದಯ ಭಾಗದ ವೈಮಾನಿಕ ನೋಟ- ಅಭಿವೃದ್ಧಿಯೋ ಅಥವಾ ನಗರೀಕರಣದ ಗೊಂದಲವೋ ಎಂಬ ಸ್ಟೇಟಸ್ ಇದ್ದು, ಚರ್ಚೆಗೆ ಇನ್ನಷ್ಟು ಬಲ ತುಂಬಿದೆ.

ಶ್ರೀಹರಿ ಕಾರಂತ ಎಂಬುವವರು ಈ ವಿಡಿಯೋವನ್ನು ಎಕ್ಸ್ ತಾಣದಲ್ಲಿ ಹಂಚಿಕೊಂಡಿದ್ದಾರೆ. ರಿಯಲ್ ಎಸ್ಟೇಟ್‌, ಕಾಂಕ್ರೀಟ್‌ ಜಂಗಲ್...