Bangalore, ಏಪ್ರಿಲ್ 19 -- ಮಾನಸ ಸರೋವರ ಎಂದಾಗ ಶ್ರೀನಾಥ್‌ ಮತ್ತು ಪದ್ಮಾವಾಸಂತಿ ನೆನಪಿಗೆ ಬರಬಹುದು. ವೇದಾಂತಿ ಹೇಳಿದನು, ಹಾಡು ಹಾಡು, ಮಾನಸ ಸರೋವರ, ಚಂದ ಚಂದ ಅಥವಾ ನೀನೇ ಸಾಕಿದ ಗಿಣಿ ಹಾಡು ನೆನಪಿಗೆ ಬರಬಹುದು. ಸಿ. ಅಶ್ವಥ್‌ ಧ್ವನಿಯಲ್ಲಿ ಕೇಳಿರಣ್ಣ ಕೇಳಿ ಹಾಡು ನೆನಪಿಗೆ ಬರಬಹುದು. ಇದೀಗ ಮತ್ತೆ ಈ ಸಿನಿಮಾವನ್ನು ಕಿರುತೆರೆ ವೀಕ್ಷಕರು ಗೌರಿ ಶಂಕರ ಹೊಸ ಅಧ್ಯಾಯದ ಮೂಲಕ ನೆನಪಿಸಿಕೊಳ್ಳಬಹುದು.

ಪುಟ್ಟಣ್ಣ ಕಣಗಾಲ್‌ ನಿರ್ದೇಶನದ ಈ ಸಿನಿಮಾದ ಸುಂದರ ಪ್ರೇಮಕಥೆ ನೆನಪಿಗೆ ಬರಬಹುದು. ಮಾನಸ ಸರೋವರ‌ ಈಗ ಪ್ರೇಕ್ಷಕರಿಗೆ ಮತ್ತೆ ನೆನಪಿಗ ಬರಬಹುದು. ಏಕೆಂದರೆ, ಕಿರುತೆರೆಯಲ್ಲಿ ಮಾನಸ ಸರೋವರದ ಜೋಡಿ "ಶ್ರೀನಾಥ್‌ ಮತ್ತು ಪದ್ಮವಸಂತಿ" ಅಭಿನಯದ ಗೌರಿ ಶಂಕರ ಸೀರಿಯಲ್‌ನ ಹೊಸ ಅಧ್ಯಾಯ ಆರಂಭವಾಗುತ್ತಿದೆ.

ಸ್ಟಾರ್‌ ಸುವರ್ಣ ಚಾನೆಲ್‌ನಲ್ಲಿ ಇತ್ತೀಚೆಗೆ ಕೊನೆಗೊಂಡ ಗೌರಿ ಶಂಕರ ಸೀರಿಯಲ್‌ ಕಿರುತೆರೆ ಪ್ರೇಕ್ಷಕರಿಗೆ ಇಷ್ಟವಾಗಿತ್ತು.

ಇದು ಗೌರಿ ಮತ್ತು ಶಂಕರನ ಕಥೆ. ವೀರಭದ್ರಪ್ಪ ಎಂಬ ವಿಲನ್‌ನ ಸಾಕು ಮಗ ಈ ಶಂಕರ. ಕೊನೆಯವರೆಗೂ ...