ಭಾರತ, ಫೆಬ್ರವರಿ 12 -- ವಿಷ್ಣು ಪ್ರಿಯ ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ನಿರ್ಮಾಪಕ ಕೆ ಮಂಜು ಮಾತನಾಡುತ್ತಾ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ಕಿಚ್ಚ ಸುದೀಪ್ ಅವರ ಕುರಿತು ಮಾತನಾಡುತ್ತಾ ಇರುತ್ತಾರೆ. ತಮ್ಮ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಸಹಕಾರ ನೀಡಿದವರೆಲ್ಲರನ್ನೂ ನೆನಪು ಮಾಡಿಕೊಳ್ಳುತ್ತಾ ಕಿಚ್ಚ ಸುದೀಪ್ ಅವರಿಗೂ ಧನ್ಯವಾದ ತಿಳಿಸುತ್ತಾರೆ. ಆದರೆ ಆ ಸಂದರ್ಭದಲ್ಲಿ ಕಿಚ್ಚ ಸುದೀಪ್ ಎನ್ನುವ ಬದಲಾಗಿ ಅವರು ಬಾಯ್ತಪ್ಪಿ ಹುಚ್ಚ ಸುದೀಪ್ ಎಂದು ಹೇಳುತ್ತಾರೆ. ಆಗ ಎಲ್ಲರ ನಗು ಕೇಳಿಸಲು ಆರಂಭವಾಗಿ ತನ್ನ ಮಾತಿನಲ್ಲಿ ತಪ್ಪಾಗಿದೆ ಎಂದು ಅರಿತ ಅವರು ತಕ್ಷಣ ಬೇರೆ ರೀತಿಯಲ್ಲಿ ಮಾತನ್ನು ಬದಲಾಯಿಸಿ, ತಾನು ಹುಚ್ಚ ಸುದೀಪ್ ಎಂದು ಹೇಳುವುದಕ್ಕೂ ಕಾರಣವಿದೆ ಎನ್ನುತ್ತಾರೆ. ನಂತರ ಕೆ ಮಂಜು ಅವರ ಬಗ್ಗೆ ಸುದೀಪ್ ಕೂಡ ಮಾತನಾಡಿದ್ದಾರೆ. ಆ ಸಂದರ್ಭದಲ್ಲಿ ಏನಾಯ್ತು ಎಂಬ ವಿವರ ಇಲ್ಲಿದೆ.

ಕೆ ಮಂಜು ಅವರ ಹುಟ್ಟುಹಬ್ಬದ ದಿನವೇ ಅವರ ಮಗ ನಾಯಕನಾಗಿ ಅಭಿನಯಿಸುತ್ತಿರುವ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಆ ಸಂದರ್ಭದಲ್...