Bengaluru, ಜನವರಿ 31 -- Max Box World Television Premiere: ಕಿಚ್ಚ ಸುದೀಪ್‌ ನಾಯಕನಾಗಿ ನಟಿಸಿರುವ ಮ್ಯಾಕ್ಸ್‌ ಸಿನಿಮಾ ಡಿಸೆಂಬರ್‌ 25ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಕಾರ್ತಿಕೇಯನ್‌ ನಿರ್ದೇಶನದಲ್ಲಿ ಮೂಡಿಬಂದ ಪ್ಯಾನ್‌ ಇಂಡಿಯಾ ಮಟ್ಟದ ಈ ಸಿನಿಮಾ, ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳಿನಲ್ಲಿಯೂ ಬಿಡುಗಡೆ ಆಗಿತ್ತು. ವಿಮರ್ಶೆ ದೃಷ್ಟಿಯಿಂದ ಮೆಚ್ಚುಗೆ ಪಡೆದಿದ್ದ ಈ ಸಿನಿಮಾ, ಕಿಚ್ಚನ ಅಭಿಮಾನಿಗಳಿಗೂ ಮ್ಯಾಕ್ಸಿಮಮ್‌ ಇಷ್ಟವಾಗಿತ್ತು. ಈಗ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಒಂದು ತಿಂಗಳ ಮೇಲಾದರೂ, ಒಟಿಟಿ ಅಪ್‌ಡೇಟ್‌ ಸಿಕ್ಕಿಲ್ಲ. ಈ ನಡುವೆ ಜೀ ಕನ್ನಡದಿಂದ ಅಚ್ಚರಿಯ ಸರ್ಪ್ರೈಸ್‌ ಹೊರಬಿದ್ದಿದೆ.

ಮ್ಯಾಕ್ಸ್‌ ಸಿನಿಮಾಕ್ಕೂ ಮುನ್ನ ಕಿಚ್ಚ ಸುದೀಪ್‍ ಅಭಿನಯದ ಸಿನಿಮಾವೊಂದು ಬಿಡುಗಡೆಯಾಗಿ ಸರಿ ಸುಮಾರು ಎರಡೂವರೆ ವರ್ಷಗಳೇ ಆಗಿವೆ. ವಿಕ್ರಾಂತ್ ರೋಣದಲ್ಲಿ ಎದುರಾಗಿದ್ದನ್ನು ಬಿಟ್ಟರೆ, ಚಿತ್ರಮಂದಿರಗಳಲ್ಲಿ ಕಿಚ್ಚನ ದರ್ಶನ ಆಗಿರಲಿಲ್ಲ. ಆ ಕಾಯುವಿಕೆಗೆ ಮ್ಯಾಕ್ಸ್‌ ಸಿನಿಮಾ ಉತ್ತರವಾಗಿತ್ತು...