Bengaluru, ಏಪ್ರಿಲ್ 16 -- ʻಮ್ಯಾಕ್ಸ್‌ʼ ಸಿನಿಮಾ ಬಳಿಕ ಕಿಚ್ಚ ಸುದೀಪ್‌ ಮುಂದಿನ ಸಿನಿಮಾ ಯಾವುದು, ಯಾವ ಚಿತ್ರವನ್ನು ಘೋಷಣೆ ಮಾಡುತ್ತಾರೆ ಎಂಬ ಪ್ರಶ್ನೆಗೆ ಅದಾಗಲೇ ಅವರ ಅಭಿಮಾನಿ ಬಳಗಕ್ಕೆ ಉತ್ತರ ಸಿಕ್ಕಿತ್ತು. ಅನೂಪ್‌ ಭಂಡಾರಿ ಜತೆಗೆ ʻಬಿಲ್ಲ ರಂಗ ಬಾಷಾʼ ಸಿನಿಮಾ ಸೆಟ್ಟೇರಲಿದೆ ಅನ್ನೋ ವಿಚಾರವನ್ನು ಕಿಚ್ಚನ ಬರ್ತ್‌ಡೇ ದಿನವೇ ಘೋಷಣೆ ಮಾಡಿ, ಫ್ಯಾನ್ಸ್‌ಗೆ ಬಿಗ್‌ ಸರ್ಪ್ರೈಸ್‌ ನೀಡಿತ್ತು ಚಿತ್ರತಂಡ. ಇದೀಗ ಇದೇ ʻಬಿಲ್ಲ ರಂಗ ಬಾಷಾʼ ಸಿನಿಮಾದಿಂದ ಹೊಸ ಅಪ್‌ಡೇಟ್‌ ಸುದ್ದಿಯೊಂದು ಹೊರಬಿದ್ದಿದೆ.

ಕಳೆದ ವರ್ಷದ ಸೆಪ್ಟೆಂಬರ್‌ 2ರಂದು ಕಿಚ್ಚನ ಬರ್ತ್‌ಡೇ ಪ್ರಯುಕ್ತ ʻಬಿಲ್ಲ ರಂಗ ಬಾಷಾʼ ಸಿನಿಮಾದ ಕಾನ್ಸೆಪ್ಟ್‌ ವಿಡಿಯೋ ತುಣುಕನ್ನು ಬಿಡುಗಡೆ ಮಾಡಿ ಕುತೂಹಲಕ್ಕೆ ಒಗ್ಗರಣೆ ಹಾಕಿದ್ದ ಚಿತ್ರತಂಡ, ಈ ಸಿನಿಮಾದ ನಿರ್ಮಾಪಕರು ಯಾರು ಎಂಬುದನ್ನೂ ರಿವೀಲ್‌ ಮಾಡಿತ್ತು. ಟಾಲಿವುಡ್‌ನಲ್ಲಿ ಕಳೆದ ವರ್ಷ ತೆರೆಕಂಡು ಹಿಟ್‌ ಆಗಿದ್ದ, ʻಹನುಮಾನ್‌ʼ ಸಿನಿಮಾ ನಿರ್ಮಾಣ ಮಾಡಿದ್ದ ಪ್ರೈಂ ಶೋ ಎಂಟರ್‌ಟೈನ್‌ಮೆಂಟ್‌ ಸಂಸ್ಥೆಯೇ ʻಬಿಲ್ಲ ರಂಗ...