ಭಾರತ, ಏಪ್ರಿಲ್ 20 -- ಕಳೆದ ವರ್ಷದ ಸೆಪ್ಟೆಂಬರ್‌ 2ರಂದು ಸುದೀಪ್‌ ಹುಟ್ಟು ಹಬ್ಬದ ಪ್ರಯುಕ್ತ ʻಬಿಲ್ಲ ರಂಗ ಬಾಷಾʼ ಸಿನಿಮಾದ ಕಾನ್ಸೆಪ್ಟ್‌ ವಿಡಿಯೋ ಬಿಡುಗಡೆ ಆಗಿತ್ತು. ಅಲ್ಲಿಂದೀಚೆಗೆ ಈ ಸಿನಿಮಾದ ಹೊಸ ಅಪ್‌ಡೇಟ್‌ ಸಿಕ್ಕಿರಲಿಲ್ಲ.

ತೆಲುಗಿನಲ್ಲಿ ʻಹನುಮಾನ್‌ʼ ಸಿನಿಮಾ ನಿರ್ಮಾಣ ಮಾಡಿದ್ದ ಪ್ರೈಂ ಶೋ ಎಂಟರ್‌ಟೈನ್‌ಮೆಂಟ್‌ ಸಂಸ್ಥೆ ʻಬಿಲ್ಲ ರಂಗ ಬಾಷಾʼ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ ಎಂಬುದು ಇತ್ತೀಚೆಗಷ್ಟೇ ರಿವೀಲ್‌ ಆಗಿತ್ತು.

ಪ್ರೈಂ ಶೋ ಎಂಟರ್‌ಟೈನ್‌ಮೆಂಟ್‌ ಬ್ಯಾನರ್‌ನಲ್ಲಿ ಕೆ ನಿರಂಜನ್‌ ರೆಡ್ಡಿ ಮತ್ತು ಚೈತನ್ಯ ರೆಡ್ಡಿ ʻಬಿಲ್ಲ ರಂಗ ಬಾಷಾʼ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕನ್ನಡದ ಜತೆಗೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಈ ಸಿನಿಮಾ ತೆರೆಗೆ ಬರಲಿದೆ.

ಇದೀಗ ಇದೇ ʻಬಿಲ್ಲ ರಂಗ ಬಾಷಾʼ ಚಿತ್ರಕ್ಕೆ ನಾಯಕಿ ಯಾರು? ಈ ವಿಚಾರಕ್ಕೆ ಸಂಬಂಧಿಸಿದಂತೆ ಬಹುಭಾಷಾ ನಟಿಯ ಹೆಸರು ಮುನ್ನೆಲೆಗೆ ಬಂದಿದೆ. ಅಚ್ಚರಿಯ ವಿಚಾರ ಏನೆಂದರೆ ಆ ನಟಿ ಕರ್ನಾಟಕ ಮೂಲದವರೇ!

ಹೌದು, ಆ ನಟಿ ಬೇರಾರು ಅ...