Bengaluru, ಏಪ್ರಿಲ್ 23 -- ಸೋಶಿಯಲ್ ಮೀಡಿಯಾದಲ್ಲಿ ಬರೆದು ಪೋಸ್ಟ್ ಮಾಡಲು ಅಪ್ಪಣೆ ಬೇಕಿಲ್ಲ. ಹೀಗಾಗಿ ಎಲ್ಲರೂ ಅವರವರಿಗೆ ತೋಚಿದ್ದು ಬರೆದು ಹಾಕುತ್ತಿದ್ದಾರೆ. ಇದು ಭಾರತ , ಇದು ಸ್ವಂತಂತ್ರ್ಯ. ಈಗ ವಿಷಯಕ್ಕೆ ಬರೋಣ. ಬರೆಯುವ ಉತ್ಸಾಹದಲ್ಲಿ ಕೆಲವರು ಮೋದಿ ಅವರನ್ನು ಕೈಲಾಗದವರು ಎಂದು ಮತ್ತು ಅಮಿತ್ ಷಾ ಅವರನ್ನು ಕೇವಲ ಉಗ್ರ ಭಾಷಣಕಾರ ಎಂದು ನಿಂದಿಸಿ ಕೂಡ ಬರೆದಿದ್ದಾರೆ. ಗಮನಿಸಿ ನಿನ್ನೆ ಕಾಶ್ಮೀರದಲ್ಲಿ ನಡೆದಿರುವ ಘಟನೆಗೆ ಮೇಲಿನಿಂದ ಅಪ್ಪಣೆ ಬಂದಿರುತ್ತದೆ. ಭಾರತವನ್ನು ಅಂತಂತ್ರ ಗೊಳಿಸಲು ಹುನ್ನಾರಗಳು ನಡೆಯುತ್ತಲೇ ಇವೆ. ಇಂತಹ ಒಂದು ಕಿಡಿಯನ್ನು ಹಚ್ಚಿ ಬಿಟ್ಟರೆ ಸಾಕು ಅದು ಜನಾಕ್ರೋಶಕ್ಕೆ ತಿರುಗುತ್ತದೆ. ನಂತರ ಕೇಂದ್ರ ಸರಕಾರ ತಕ್ಷಣ ಅದಕ್ಕೆ ಪ್ರತ್ಯುತ್ತರ ನೀಡುವ ದರ್ದಿಗೆ ಬೀಳುತ್ತದೆ. ಕೇಂದ್ರ ಸರಕಾರ ತಕ್ಷಣ ಪ್ರತಿಕ್ರಿಯೆ ನೀಡಿದರೆ ಅದನ್ನು ದೊಡ್ಡ ಮಟ್ಟದಲ್ಲಿ ದೇಶಾದ್ಯಂತ ಹಿಂದೂ ಮುಸ್ಲಿಂ ಗಲಾಟೆಯನ್ನಾಗಿ ಪಸರಿಸಬಹುದು. ಕೇಂದ್ರ ಸರಕಾರಕ್ಕೆ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಕೆಲವು ರಾಜಕೀಯ ನಾಯಕರ ಅಪ್ಪಣೆಯ...