Kodagu, ಏಪ್ರಿಲ್ 25 -- ಕೊಡಗು ಜಿಲ್ಲೆಯ ಅತ್ಯುನ್ನತ ಪರ್ವತವಾದ ತಡಿಯಾಂಡಮೋಳ್ ಕರ್ನಾಟಕದ 2ನೇ ಎತ್ತರದ ಶಿಖರ ಚಾರಣಿಗರ ಸ್ವರ್ಗ ಎನ್ನಿಸಿದೆ.ಬೇಸಿಗೆಯಲ್ಲಿ ಹೆಚ್ಚಿನ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.

ತಡಿಯಂಡಮೋಳ್ ಬೆಟ್ಟವು ಕೊಡಗು ಜಿಲ್ಲೆಯಲ್ಲಿರುವ ಅತ್ಯಂತ ಎತ್ತರವಾದ ಬೆಟ್ಟ. ಇದು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಬರುತ್ತದೆ. ಇದರ ಎತ್ತರ ಸುಮಾರು 1748 ಮೀಟರ್. ಇದು ಚಾರಣಿಗರ ಪಾಲಿಗೆ ಬಹಳ ಪ್ರಿಯವಾದ ಜಾಗ. ಇದು ವಿರಾಜಪೇಟೆಯಿಂದ ಸುಮಾರು 30 ಕಿ.ಮೀ ದೂರದಲ್ಲಿದೆ

5700 ಅಡಿ ಎತ್ತರದ ಕೊಡಗಿನ ತಡಿಯಾಂಡಮೋಳ್ ಬೆಟ್ಟ ಶ್ರೇಣಿಯು ಬೇಸಿಗೆಯ ಜ್ವಾಲೆಯ ನಡುವೆಯೂ ನಿರಂತರ 3 ಗಂಟೆಗಳ ನಡಿಗೆಯಿಂದ ಮೇಲೇರಿದ ನಮ್ಮನ್ನು ನಿರಾಸೆಗೊಳಿಸಲಿಲ್ಲ ಎಂದು ಮೈಸೂರಿನ ಲೇಖಕ ನಿ.ಗೂ ರಮೇಶ್‌ ಬರೆದುಕೊಂಡಿದ್ದಾರೆ.

ತಾತ್ಕಾಲಿಕವಾಗಿ ನಮ್ಮನ್ನು ಸ್ವಾಗತಿಸಲು ಎಂಬಂತೆ ಸೂರ್ಯನನ್ನು ಮೋಡಗಳು ಮರೆಮಾಡಿದವು! ಬೆಟ್ಟದ ತಪ್ಪಲಿನಿಂದ ಮೇಲೇರಿ ಬಂದ ಮೋಡಗಳನ್ನು ಅಪ್ಪಿ ಬಾಚಿಕೊಳ್ಳುವುದಷ್ಟೇ ನಮ್ಮ ಸಂಭ್ರಮವಾಗಿತ್ತು. ಮೋಡಗಳಿಗಿಂತ ನಾವೇ ಎತ್ತರದಲ್ಲಿ ನ...