Shimoga, ಏಪ್ರಿಲ್ 22 -- ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಮಂಗಳವಾರ ನಡೆದ ಉಗ್ರರ ದಾಳಿಯಲ್ಲಿ ಶಿವಮೊಗ್ಗ ಮೂಲದ ರಿಯಲ್‌ ಎಸ್ಟೇಟ್‌ ಉದ್ಯಮಿ ಮಂಜುನಾಥರಾವ್‌ ಹತರಾಗಿದ್ದಾರೆ. ಪ್ರವಾಸಕ್ಕೆಂದು ಕುಟುಂಬ ಸಮೇತ ತೆರಳಿದ್ದಾಗ ಉಗ್ರರು ನಡೆಸಿದ ದಾಳಿ ವೇಳೆ ಅವರು ಜೀವ ಕಳೆದುಕೊಂಡಿದ್ದಾರೆ. ದಾಳಿ ವೇಳೆ ಪತ್ನಿ ಪಲ್ಲವಿ ಹಾಗೂ ಪುತ್ರ ಕೂಡ ಜತೆಗಿದ್ದರೂ ಅವರು ಬದುಕುಳಿದಿದ್ದಾರೆ. ಕಾಶ್ಮೀರ ಪ್ರವಾಸದಲ್ಲಿದ್ದ ಕೆಲವು ಕನ್ನಡ ಕುಟುಂಬಗಳು ಸಿಲುಕಿದ್ದು, ತವರು ನೆಲಕ್ಕೆ ವಾಪಾಸಾಗಲು ಮುಂದಾಗಿವೆ. ಉಗ್ರರ ದಿಢೀರ್‌ ದಾಳಿ ನಂತರ ಕಾಶ್ಮೀರದಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಕಾಶ್ಮೀರಕ್ಕೆಂದು ಬೇಸಿಗೆ ರಜೆಗೆಂದು ಬಂದ ಪ್ರವಾಸಿಗರು ಆತಂಕದಿಂದಲೇ ವಾಪಸಾಗಲು ಮುಂದಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಸರ್ಕಾರವೂ ಉಗ್ರರ ಉಪಟಳ ನಿಯಂತ್ರಿಸಲು ಪ್ರವಾಸಿಗರನ್ನು ಸುರಕ್ಷಿತವಾಗಿ ಮರಳಿ ಕಳುಹಿಸಲು ವ್ಯವಸ್ಥೆ ಮಾಡುತ್ತಿದೆ.

ಶಿವಮೊಗ್ಗದಲ್ಲಿ ಹಲವು ವರ್ಷಗಳಿಂದ ರಿಯಲ್‌ ಎಸ್ಟೇಟ್‌ ವಲಯದಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥರಾವ್‌(47) ಅವರು...