ಭಾರತ, ಫೆಬ್ರವರಿ 21 -- ಬೀದರ್‌: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳಕ್ಕೆ ಹೋಗಿದ್ದ ಬೀದರ್‌ನ ಯಾತ್ರಿಕರ ಪೈಕಿ ಐವರು ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾದರು ಎಂದು ಹೇಳಲಾಗುತ್ತಿದೆ. ಮಹಾಕುಂಭ ಮೇಳಕ್ಕೆ ಹೋಗಿ ಅಲ್ಲಿಂದ ಕಾಶಿಗೆ ಹೋಗುತ್ತಿದ್ದಾಗ, ಕಾಶಿ ಸಮೀಪ ಬೀದರ್‌ನ ಕ್ರೂಸರ್ ಎದುರು ಇದ್ದ ಲಾರಿಗೆ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ. ಈ ದುರಂತದಲ್ಲಿ 7 ಜನ ಗಂಭೀರ ಗಾಯಗೊಂಡಿರುವುದಾಗಿ ಹೇಳಲಾಗುತ್ತಿದೆ. ಮೃತ ಯಾತ್ರಿಕರು ಬೀದರ್ ನಗರದ ಲಾಡಗೇರಿ ಬಡಾವಣೆಯ ನಿವಾಸಿಗಳು ಎಂದು ತಿಳಿದುಬಂದಿದೆ.

ಬೀದರ್‌ ನಗರದಿಂದ ಒಂದೇ ಕುಟುಂಬದ 12 ಜನ ಕ್ರೂಸರ್‌ನಲ್ಲಿ ಪ್ರಯಾಗ್‌ರಾಜ್‌ನ ಮಹಾಕುಂಭ ಮೇಳಕ್ಕೆ ಎರಡು ದಿನ ಹಿಂದೆ ಹೊರಟಿದ್ದರು. ಉತ್ತರ ಪ್ರದೇಶದ ಮಿರಾಜ್‌ಪುರ್ ಜಿಲ್ಲೆಯ ರೂಪಾಪುರ್‌ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಬೀದರ್‌ನ ಕ್ರೂಸರ್ ಡಿಕ್ಕಿ ಹೊಡಿದೆ. ಶುಕ್ರವಾರ (ಫೆ 21) ಬೆಳಿಗ್ಗೆ ಈ ದುರಂತ ಸಂಭವಿಸಿದೆ. ಅಪಘಾತ ಸ್ಥಳದಲ್ಲೇ ಐವರು ಮೃತಪಟ್ಟಿದ್ದರು, ಏಳು ಜನ ಗಾಯಗೊಂಡಿದ್ದಾರೆ...