ಭಾರತ, ಏಪ್ರಿಲ್ 16 -- ಸನ್​​ರೈಸರ್ಸ್ ಹೈದರಾಬಾದ್ ಐಪಿಎಲ್​ನಲ್ಲಿ ಅತ್ಯಂತ ಭಯಾನಕ ತಂಡಗಳಲ್ಲಿ ಒಂದು. ಶ್ರೀಮಂತ ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಮೊದಲ ತಂಡ ಮತ್ತು ಅತಿ ಹೆಚ್ಚು ರನ್ ಚೇಸ್ ಮಾಡಿದ 2ನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 2024ರಲ್ಲಿ ರನ್ನರ್​ಅಪ್ ಆಗಿದ್ದ ಎಸ್​ಆರ್​ಹೆಚ್, ಈ ಬಾರಿ ಕಳಪೆ ಪ್ರದರ್ಶನ ನೀಡುತ್ತಿದೆ. ಆದರೆ ಈ ತಂಡದ ಮಾಲಕಿ ಕಾವ್ಯಾ ಮಾರನ್ ಕುರಿತು ಸಾಕಷ್ಟು ಮಂದಿಗೆ ತಿಳಿದಿಲ್ಲ. ಅವರ ಆಸ್ತಿ ಮೌಲ್ಯ ಎಷ್ಟಿದೆ? ಅವರ ಹಿನ್ನೆಲೆ ಏನು? ಐಪಿಎಲ್​ ಜೊತೆಗೆ ಬೇರೆ ಫ್ರಾಂಚೈಸಿ ಲೀಗ್​ನಲ್ಲಿ ತಂಡ ಹೊಂದಿದ್ದಾರೆ ಎನ್ನುವ ಕುರಿತು ಈ ಮುಂದೆ ತಿಳಿಯೋಣ.

ಸೌತ್ ಆಫ್ರಿಕಾ ಟಿ20 ಲೀಗ್​ನಲ್ಲಿ ಸನ್​ರೈಸರ್ಸ್ ಈಸ್ಟರ್ನ್ ಕೇಪ್​ನ ತಂಡ ಹೊಂದಿರುವ ಕಾವ್ಯಾ ಮಾರನ್, 1992ರ ಆಗಸ್ಟ್ 6ರಂದು ಜನಿಸಿದ್ದಾರೆ. ಕಾವ್ಯಾ ಅವರು ಪ್ರಬಲ ವ್ಯಾಪಾರ ಕುಟುಂಬದಿಂದ ಬಂದವರು. ಕಾವ್ಯಾ ಮಾರನ್ ಅವರ ತಂದೆ ಕಲಾನಿಧಿ ಮಾರನ್ ಸನ್ ಗ್ರೂಪ್ ನ ಅಧ್ಯಕ್ಷ ಮತ್ತು ಸ್ಥಾಪಕರು. ತಾಯಿ ಕಾವೇರಿ ಮಾರನ್ ಅವರು ಸೋಲಾರ್ ಟಿ...