Bengaluru, ಏಪ್ರಿಲ್ 19 -- ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವಿಶೇಷವಾಗಿ ಫೇಸ್‌ಬುಕ್‌ನಲ್ಲಿ ಕವಿತೆ, ಕಾವ್ಯಗಳ ವಿಚಾರ ಬಹಳ ಚರ್ಚೆಗೆ ಗ್ರಾಸವಾಗಿದೆ. ಕರ್ನಾಟಕ ಲೇಖಕಿಯರ ಸಂಘ (ರಿ) ಬೆಂಗಳೂರು ಆಯೋಜಿಸಿದ್ದ 'ಅರಿವೆಂಬುದು ಬಿಡುಗಡೆ' ಘೋಷವಾಕ್ಯದಡಿ 8ನೆಯ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನದ ವಿಡಿಯೋಗಳ ಪೈಕಿ ಕೆಲವು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಹಲವು ರೀತಿಯ ಚರ್ಚೆಗಳು ನಡೆಯುತ್ತಿವೆ. ಕವಿತೆಗಳ ಗುಣಮಟ್ಟದ ಕುರಿತಾದ ಚರ್ಚೆ ಒಂದೆಡೆ, ಇನ್ನೊಂದೆಡೆ, ಕವಿತೆ, ಕಾವ್ಯಗಳಲ್ಲಿ ಹೆಣ್ಣಿನ ವರ್ಣನೆ, ಹೆಣ್ಣಿನ ಶೋಷಣೆ ಮುಂತಾದವು ಗಮನಸೆಳೆದಿದೆ. ಈ ಪೈಕಿ ಲೇಖಕ ಅರುಣ್ ಜೋಳದ ಕೂಡ್ಲಿಗಿ ಅವರ ಬರಹವೂ ಒಂದು. ಅವರು ಅಕ್ಕಮಹಾದೇವಿಯನ್ನೂ ಗಂಡಸರು ಕಾಡಿದ್ದರು ಎಂದು ಕೆಲವು ವಿಚಾರಗಳತ್ತ ಗಮನಸೆಳೆದಿದ್ದಾರೆ. ಅದು ಇಲ್ಲಿದೆ.

ಪುರುಷ ವಚನಕಾರರಲ್ಲೇ ಹೆಣ್ಣನ್ನು ಗಂಡಿನ ಆಧೀನ, ಗಂಡನ್ನು ಶಕ್ತಿಕುಂದಿಸುವ ಚಂಚಲೆ ಎಂತೆಲ್ಲಾ ಬರೆದಿದ್ದಾರೆ. ಹೇಮಗಲ್ಲ ಹಂಪ ಎಂಬ ಒಬ್ಬ ವಚನಕಾರನಿದ್ದಾನೆ, ಆತ ಹೆಣ್ಣಿನ ಮೊಲೆಗಳನ್ನು 'ಹೆಣ್ಣಿನ ಮುದ್ದು...