Mysuru, ಮೇ 14 -- ಮೈಸೂರು: ಐದು ದಿನದ ಹಿಂದೆಯಷ್ಟೇ ಖ್ಯಾತ ವಿಜ್ಞಾನಿ ಪದ್ಮಶ್ರೀ ಡಾ.ಎಸ್. ಅಯ್ಯಪ್ಪನ್ ಅವರು ಮೈಸೂರು- ಬೆಂಗಳೂರು ಹೆದ್ದಾರಿಯ ಶ್ರೀರಂಗಪಟ್ಟಣ ಕಾವೇರಿ ನದಿಯಲ್ಲಿ ಮೃತಪಟ್ಟಿದ್ದರು. ಮನೆಯಿಂದ ಕಾಣೆಯಾಗಿ ಮೂರು ದಿನದ ಬಳಿಕ ಅವರ ಶವ ಪತ್ತೆಯಾಗಿತ್ತು. ಭಾರತೀಯ ಕೃಷಿ ಮಹಾಸಂಸ್ಥೆ ಮುಖ್ಯಸ್ಥರಾಗಿ, ಪ್ರಮುಖ ಸಮಿತಿಗಳಲ್ಲಿ ತೊಡಗಿಸಿಕೊಂಡಿದ್ದ ಅಯ್ಯಪ್ಪನ್ ಅವರ ಅಕಾಲಿಕ ಸಾವು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಇಂತಹ ಉನ್ನತ ಸ್ಥಾನದಲ್ಲಿರುವ ವ್ಯಕ್ತಿ ಹೊಳೆಯಲ್ಲಿ ಶವವಾಗಿ ಪತ್ತೆಯಾಗಿದ್ದು ಚರ್ಚೆಗಳನ್ನು ಹುಟ್ಟು ಹಾಕಿತ್ತು. ವಿಜ್ಞಾನಿಗಳು ಕೂಡ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎನ್ನುವ ಒತ್ತಾಯ ಮಾಡಿದ್ದರು. ಇದರ ನಡುವೆ ಡಾ.ಅಯ್ಯಪ್ಪನ್ ಅವರ ಕುಟುಂಬದವರ ಮೊದಲ ಬಾರಿಗೆ ಸಾವಿನ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ನಾವು, ಪದ್ಮಶ್ರೀ ಡಾ. ಎಸ್. ಅಯ್ಯಪ್ಪನ್ ಅವರ ವಿಯೋಗದಿಂದ ತೀವ್ರ ದುಃಖಿತರಾಗಿದ್ದೇವೆ. ಈ ದುರದೃಷ್ಟಕರ ಘಟನೆಯ ಕುರಿತು ಅಧಿಕೃತ ಹೇಳಿಕೆಯನ್ನು ನಾವು ಪ್ರಕಟಿಸಲು ಬಯಸುತ್ತೇವೆ....
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.