Bengaluru, ಮೇ 6 -- ಜೀವನದಲ್ಲಿ ಯಾವುದೇ ರೀತಿಯ ತೊಂದರೆ ಉಂಟಾದರೂ ಜನರು ಮೊದಲು ಭಯಪಡುವುದು ಸರ್ಪ ದೋಷದ ಬಗ್ಗೆ. ಅವುಗಳಲ್ಲಿ ಸರ್ಪ ದೋಷ, ಸರ್ಪ ಶಾಪ ಮತ್ತು ಕಾಳಸರ್ಪ ದೋಷ ಬಹುಮುಖ್ಯವಾದವು. ಯಾವುದೇ ಕುಂಡಲಿಯಲ್ಲಿ ಈ ಮೇಲಿನ ಅಂಶಗಳನ್ನು ಕಂಡರೆ ಭಯ ಪಡುವ ಅಗತ್ಯವಿಲ್ಲ. ಪ್ರತಿಯೊಂದು ದೋಷಗಳಿಗೂ ತನ್ನದೇ ಆದ ಪರಿಹಾರಗಳು ಇರುತ್ತವೆ. ಇದರಲ್ಲಿ ಮುಖ್ಯವಾಗಿ ವಿಶಾಖ ನಕ್ಷತ್ರದ ಪೂಜೆ.

ಬ್ರಹ್ಮಚಾರಿ ಪೂಜೆ, ಷಷ್ಠಿ ಪೂಜೆ, ಆಶ್ಲೇಷ ಬಲಿ ಪೂಜೆ, ಸರ್ಪ ಸೂಕ್ತ ಹೋಮ, ಪುರುಷ ಸೂಕ್ತ ಹೋಮ, ನಾಗ ಪ್ರತಿಷ್ಠೆ ಇನ್ನೂ ಮುಂತಾದ ಪೂಜೆಗಳನ್ನು ಮಾಡುವ ಮೂಲಕ ದೋಷದಿಂದ ಹೊರಬರಬಹುದು. ಹಣವಿದ್ದವರು ಯಾವುದೇ ಪರಿಹಾರ ಮಾಡಬಲ್ಲರು. ಆದರೆ ಜನ ಸಾಮಾನ್ಯರು ಮಂತ್ರಗಳನ್ನು ಪಠಿಸುವುದು, ಕೆಲವು ಕಥೆಗಳನ್ನು ಓದುವುದು ಮತ್ತು ಇನ್ನಿತರ ಸರಳವಾದ ದಾನ ಧರ್ಮಗಳಿಂದ ಪರಿಹಾರವನ್ನು ಪಡೆಯಬಹುದು.

ಲಗ್ನದ ಸಮೇತ ಎಲ್ಲಾ ನವಗ್ರಹಗಳು ರಾಹು ಮತ್ತು ಕೇತುಗಳ ನಡುವೆ ಇದ್ದಲ್ಲಿ ಅದನ್ನು ಕಾಳ ಸರ್ಪ ದೋಷ ಎಂದು ಕರೆಯುತ್ತೇವೆ. ಕೇವಲ ಲಗ್ನಕುಂಡಲಿಯಲ್ಲಿ ಕಾಳ ಸರ್ಪ ದ...