ಭಾರತ, ಏಪ್ರಿಲ್ 12 -- ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ (ಏಪ್ರಿಲ್‌ 12) ಪಂಜಾಬ್ ಕಿಂಗ್ಸ್ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ (Sunrisers Hyderabad vs Punjab Kings) ತಂಡಗಳ ನಡುವೆ ಐಪಿಎಲ್‌ (IPL 2025) ಪಂದ್ಯ ನಡೆಯುತ್ತಿದೆ. ಪಂದ್ಯದ ವೇಳೆ ಫೀಲ್ಡಿಂಗ್‌ ಮಾಡುತ್ತಿದ್ದ ಎಸ್‌ಆರ್‌ಎಚ್‌ ತಂಡದ ಆಟಗಾರ ಇಶಾನ್‌ ಕಿಶನ್‌, ಚೆಂಡು ಹುಡುಕಿದ ಪರಿಗೆ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ತಲೆ ಕೆರೆದುಕೊಳ್ಳುವಂತಾಗಿದೆ. ವಿಲಕ್ಷಣ ಫೀಲ್ಡಿಂಗ್‌ನಿಂದ ಖುದ್ದು ಇಶಾನ್‌ ಕಿಶನ್‌ ಅವರಿಗೂ ಮುಜುಗರವಾಗಿದೆ.

ಪಂಜಾಬ್ ಕಿಂಗ್ಸ್‌ ತಂಡದ ಆರಂಭಿಕ ಬ್ಯಾಟರ್‌ ಪ್ರಭ್‌ಸಿಮ್ರನ್ ಸಿಂಗ್ ಅವರು, ಮೊದಲ ಓವರ್‌ನ ಎರಡನೇ ಎಸೆತವನ್ನು ಡ್ರೈವ್‌ ಮಾಡಿದರು. ಈ ವೇಳೆ ಇಶಾನ್ ಕಿಶನ್ ಅವರತ್ತ ಚೆಂಡು ಬಂತು. ಕಿಶನ್‌ ಕಳಪೆ ಫೀಲ್ಡಿಂಗ್‌ನಿಂದಾಗಿ ಚೆಂಡು ಹಿಡಿಯಲು ಅವರಿಂದ ಸಾಧ್ಯವಾಗಲಿಲ್ಲ. ಮೊದಲ ಪ್ರಯತ್ನವದಲ್ಲಿ ಅವರ ಕೈಗೆ ಚೆಂಡು ಸಿಗಲಿಲ್ಲ. ಒಂದು ರೋಲ್‌ ಆಗಿ ಎದ್ದ ಕಿಶನ್‌, ಚೆಂಡನ್ನು ಹುಡುಕಲು...