ಭಾರತ, ಫೆಬ್ರವರಿ 4 -- ಬೆಂಗಳೂರು: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ರಾಜ್ಯದ ಬೆಳಗಾವಿಯ ನಾಲ್ವರು ಸೇರಿ 30 ಯಾತ್ರಾರ್ಥಿಗಳು ಸಾವನ್ನಪ್ಪಿದ್ದರು. ಈ ದುರಂತ ಸಂಭವಿಸಿದ ನಂತರ ಮಹಾ ಕುಂಭಮೇಳಕ್ಕೆ ತೆರಳುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ ಎಂದು ವಾಯುಯಾನ ಮತ್ತು ರೈಲ್ವೆ ಮೂಲಗಳಿಂದ ತಿಳಿದುಬಂದಿದೆ. ಅದರಲ್ಲೂ ಬೆಳಗಾವಿಯ ನಾಲ್ವರು ಅಸುನೀಗಿದ ಹಿನ್ನೆಲೆಯಲ್ಲಿ ರಾಜ್ಯದಿಂದ ತೆರಳುವ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ. ಅಲ್ಲಿಗೆ ಹೋಗಬೇಕು ಎಂದು ಅಂದುಕೊಂಡವರು ತಮ್ಮ ಪ್ರವಾಸವನ್ನು ಮುಂದೂಡಿರುವುದು ಮಾತ್ರವಲ್ಲ, ಈಗಾಗಲೇ ಟೂರ್ ಪ್ಯಾಕೇಜ್ ಸಂಸ್ಥೆಗಳಲ್ಲಿ ಟಿಕೆಟ್ ಕಾಯ್ದಿರಿಸಿದ್ದವರೂ ಪ್ರಯಾಣವನ್ನು ರದ್ದುಗೊಳಿಸಿದ್ದಾರೆ. ಅವರ ಪ್ರಕಾರ ಶೇ. 25ರಿಂದ 30ರಷ್ಟು ಮಂದಿ ಟಿಕೆಟ್ ಕ್ಯಾನ್ಸಲ್ ಮಾಡಿಸಿದ್ದಾರೆ.

ಟೂರ್ ಪ್ಯಾಕೇಜ್ ದರ 30 ಸಾವಿರದಿಂದ 1.50 ಲಕ್ಷ ರೂಪಾಯಿವರೆಗೆ ನಿಗದಿಯಾಗಿತ್ತು. ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಬಸ್, ರೈಲು ಮತ್...