ಭಾರತ, ಜೂನ್ 5 -- 18 ವರ್ಷಗಳ ನಂತರ ಆರ್‌ಸಿಬಿ ತಂಡವು ಐಪಿಎಲ್ ಟ್ರೋಫಿ ಗೆದ್ದರೂ, ಆ ಸಂಭ್ರಮ ಹೆಚ್ಚು ಸಮಯ ಉಳಿದಿಲ್ಲ. ಬೆಂಗಳೂರಿನಲ್ಲಿ ನಡೆದ ವಿಜಯೋತ್ಸವದ ಸಂದರ್ಭದಲ್ಲಿ ನಗರದ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ನಡೆದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ.‌ ತಂಡದ ಗೆಲುವಿನ ಸಂಭ್ರಮಾಚರಣೆಗೆ ಬಂದ ಅಭಿಮಾನಿಗಳ ಮನೆಯಲ್ಲಿ ಸೂತಕದ ವಾತಾವರಣ ಮನೆ ಮಾಡಿದೆ. ಘಟನೆ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಆರ್‌ಸಿಬಿ ಫ್ರಾಂಚೈಸ್‌ ಕೂಡಾ ಈ ರೀತಿಯ ಘಟನೆ ನಡೆಯಬಾರದಿತ್ತು ಎಂದು ಸೋಷಿಯಲ್‌ ಮೀಡಿಯಾದಲ್ಲಿ ಹೇಳಿಕೊಂಡಿದೆ.

ಬೆಂಗಳೂರಿನಲ್ಲಿ ಆರ್‌ಸಿಬಿ ಅಭಿಮಾನಿಗಳಿಗೆ ವಿಶೇಷವಾಗಬೇಕಿದ್ದ ದಿನವು, ಗೊಂದಲ ಹಾಗೂ ಸಮನ್ವಯತೆಯ ಕೊರತೆಯಿಂದಾಗಿ ದುರಂತವಾಗಿ ಬದಲಾಯ್ತು. ಸಾವಿರಾರು ಅಭಿಮಾನಿಗಳು ನಗರದ ಕೇಂದ್ರಭಾಗದಲ್ಲಿ ಸೇರಿದ್ದರಿಂದ ಜನದಟ್ಟಣೆಯನ್ನು ನಿಯಂತ್ರಿಸಲು ಪೊಲೀಸ್ ಅಧಿಕಾರಿಗಳು ವಿಫಲರಾದರು. ನಡುವೆ ಲಾಠಿಚಾರ್ಜ್‌, ನೂಕುನುಗ್ಗಲು ಸಂಭವಿಸಿ ಕೆಲವ...