Bengaluru, ಫೆಬ್ರವರಿ 14 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಗುರುವಾರ ಫೆಬ್ರುವರಿ 13ರ ಸಂಚಿಕೆಯಲ್ಲಿ ತನ್ವಿ ಹುಟ್ಟುಹಬ್ಬದ ಆಚರಣೆ ನಡೆದಿದೆ. ತನ್ವಿ ಹುಟ್ಟುಹಬ್ಬದ ಖುಷಿ ಇದ್ದರೂ, ಇತರ ಫ್ರೆಂಡ್ಸ್‌ಗಳ ರೀತಿಯಲ್ಲಿ ಗ್ರಾಂಡ್ ಆಗಿ ಆಚರಿಸಲು ಸಾಧ್ಯವಾಗುತ್ತಿಲ್ಲವಲ್ಲ ಎಂದು ಬೇಸರ ಪಟ್ಟುಕೊಂಡಿದ್ದಾಳೆ. ಅಲ್ಲದೆ, ಮನೆಯಲ್ಲಿ ಮಾಡಿಕೊಟ್ಟ ಗುಲಾಬ್ ಜಾಮೂನ್ ಅನ್ನು ಗೆಳೆಯರಿಗೆ ಕೊಡುವುದೋ ಬೇಡವೋ ಎಂದು ಗೊಂದಲದಲ್ಲಿ ಇರುತ್ತಾಳೆ. ಅಲ್ಲದೆ, ಅವರೆಲ್ಲಾ ದೊಡ್ಡ ದೊಡ್ಡ ಬೇಕರಿ, ಕೇಕ್ ಶಾಪ್‌ಗಳಲ್ಲಿ ತಿಂಡಿ, ಕೇಕ್ ಮತ್ತು ಸ್ವೀಟ್ಸ್ ಕೊಂಡು ತಿನ್ನುವವರು, ನಾನು ಮನೆಯಲ್ಲಿ ಮಾಡಿಕೊಂಡು ಬಂದ ತಿಂಡಿಯನ್ನು ತಿನ್ನುವರೇ ಎಂದು ಯೋಚಿಸುತ್ತಿರುತ್ತಾಳೆ. ಆಗ ಅಲ್ಲಿಗೆ ಬಂದ ತನ್ವಿಯ ಗೆಳತಿ, ಹ್ಯಾಪಿ ಬರ್ತ್‌ಡೇ ತನ್ವಿ ಎಂದು ಹೇಳುತ್ತಾಳೆ, ಜತೆಗೆ ಇದೇನು ಕೊಡು ಎಂದು ಅವಳಿಂದ ಗುಲಾಬ್ ಜಾಮೂನು ತೆಗೆದುಕೊಂಡು ತಿನ್ನುತ್ತಾಳೆ.

ಇದು ಮನೆಯಲ್ಲಿ ಭಾಗ್ಯ ಆಂಟಿ ಮಾಡಿರುವ ಜಾಮೂನು ಎಂದು ಅವಳ ಗೆಳತಿಯರೆಲ್ಲರೂ ಸೇರಿ ಅದನ್ನು ...