Hyderabad, ಫೆಬ್ರವರಿ 2 -- ಹೈದ್ರಾಬಾದ್:‌ ಕಾಲೇಜುಗಳಿಗೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಅನುಕೂಲಕರವಾಗಿ ರೇಟಿಂಗ್‌ ನೀಡುವ ವಿಚಾರ ಆಗಾಗ ಚರ್ಚೆಗೆ ಬರುತ್ತವೆ. ಆಂಧ್ರಪ್ರದೇಶದಲ್ಲೂ ಇಂತಹದೇ ಪ್ರಕರಣ ವರದಿಯಾಗಿದ್ದು, ಈ ಬಾರಿ ಸಿಬಿಐ ದಾಳಿ ನಡೆಸಿದೆ. ಗುಂಟೂರಿನಲ್ಲಿ ಈ ರೀತಿ ಶಿಕ್ಷಣ ಸಂಸ್ಥೆಯೊಂದಕ್ಕೆ ಅನುಕೂಲಕರವಾಗಿ ವರದಿ ನೀಡಿ ಹಣ ಹಾಗೂ ಭಾರೀ ಪ್ರಮಾಣದ ಉಡುಗೊರೆಗಳನ್ನು ಪಡೆದಿದ್ದ ಪ್ರಕರಣನ್ನು ಸಿಬಿಐ ಬೇಧಿಸಿದೆ. ಅಲ್ಲದೇ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ( ಯುಜಿಸಿ)ದಡಿ ಬರುವ ರಾಷ್ಟ್ರೀಯ ಮೌಲ್ಯಮಾಪನ ಹಾಗೂ ಮಾನ್ಯತಾ ಮಂಡಳಿ( ನ್ಯಾಕ್‌) ತಂಡದ ಸದಸ್ಯರು ಹಾಗೂ ಗುಂಟೂರಿನ ಶೈಕ್ಷಣಿಕ ಸಂಸ್ಥೆಯ ಪ್ರಮುಖರನ್ನು ಸಿಬಿಐ ಬಂಧಿಸಿದೆ. ಅವರಿಂದ ಭಾರೀ ಪ್ರಮಾಣದ ಹಣ, ಉಡುಗೊರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಸಿಬಿಐ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ಪ್ರತಿ ವರ್ಷ ಯುಜಿಸಿ ನಿಯಮಾವಳಿಗಳ ಪ್ರಕಾರ ನ್ಯಾಕ್‌ ಸಮಿತಿಯು ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿನ ಶೈಕ್ಷಣಿಕ ಸ್ಥಿತಿಗತಿ, ಮೂಲಸೌಕರ್ಯ ಸಹಿತ ಇತರೆ ವ್ಯವಸ್...