ಭಾರತ, ಫೆಬ್ರವರಿ 11 -- ರೋಟರ್‌ಡ್ಯಾಮ್‌ನಲ್ಲಿ ನಡೆದ ಎಬಿಎನ್​ ಎಎಂಆರ್​​​ಒ ವಿಶ್ವ ಟೆನಿಸ್ ಟೂರ್ನಮೆಂಟ್​ (ABN AMRO World Tennis Tournament) ಫೈನಲ್​ನಲ್ಲಿ ಆಸ್ಟ್ರೇಲಿಯಾದ ಅಲೆಕ್ಸ್ ಡಿ ಮಿನೌರ್ ಅವರನ್ನು ಸೋಲಿಸುವ ಮೂಲಕ ಸ್ಪೇನ್​ನ ಕಾರ್ಲೋಸ್ ಅಲ್ಕರಾಜ್ ತಮ್ಮ ವೃತ್ತಿಜೀವನದ ಮೊದಲ ಒಳಾಂಗಣ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. 21 ವರ್ಷದ ಸ್ಪೇನ್‌ನ ಆಟಗಾರ ಅಲ್ಕರಾಜ್, ಮೂರನೇ ಶ್ರೇಯಾಂಕದ ಮಿನೌರ್ ಅವರನ್ನು 6-4, 3-6, 6-2 ಸೆಟ್‌ಗಳಿಂದ ಮಣಿಸಿ ಇತಿಹಾಸ ನಿರ್ಮಿಸಿದ್ದಾರೆ.

ರೋಟರ್​ಡ್ಯಾಮ್​ ಓಪನ್​ನಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ ಅಗ್ರ ಶ್ರೇಯಾಂಕದ ಅಲ್ಕರಾಜ್, 52 ವರ್ಷಗಳ ಟೂರ್ನಿಯ ಇತಿಹಾಸದಲ್ಲಿ ಪ್ರಶಸ್ತಿ ಗೆದ್ದ ಮೊದಲ ಸ್ಪೇನ್ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು. ಇದು ಅಲ್ಕರಾಜ್​ಗೆ ತನ್ನ ವೃತ್ತಿಜೀವನದ 17 ನೇ ಪ್ರಶಸ್ತಿ. ಆದರೆ ಒಳಾಂಗಣದಲ್ಲಿ ಮೊದಲ ಕಿರೀಟವಾಗಿದೆ. ಫೈನಲ್​​ಗೂ ಮುನ್ನ ಡಿ ಮಿನೌರ್ ಈ ಹಿಂದೆ ಅಲ್ಕರಾಜ್ ವಿರುದ್ಧದ ಎರಡೂ ಪಂದ್ಯಗಳಲ್ಲಿ ಸೋತಿದ್ದರು. ಇದೀಗ ಫೈನಲ್​ಗೂ ಶರಣಾಗಿ ಹ್ಯಾಟ್ರಿಕ್...