ಭಾರತ, ಏಪ್ರಿಲ್ 21 -- ವಿಂಗ್‌ ಕಮಾಂಡರ್‌ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಆಗಿರುವ ಬೋಸ್ ಎಂಬವರೇ ಹಲ್ಲೆಗೊಳಗಾದವರು. ಕನ್ನಡ ಮಾತನಾಡಲಿಲ್ಲ ಎಂಬ ಕಾರಣಕ್ಕೆ ಯುವಕನೊಬ್ಬ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾನೆ ಎಂದು ಅವರು ಆರೋಪಿಸಿದ್ದಾರೆ. ಸಿವಿ ರಾಮನ್ ನಗರದ ಡಿಆರ್‌ಡಿಒ ಕಾಲೊನಿಯಿಂದ ವಿಮಾನ ನಿಲ್ದಾಣಕ್ಕೆ ತೆರಳುವ ಸಂದರ್ಭದಲ್ಲಿ ಘಟನೆ ನಡೆದಿದ್ದು, ವಿಂಗ್ ಕಮಾಂಡರ್ ಮತ್ತು ಕಾರು ಚಲಾಯಿಸುತ್ತಿದ್ದ ಅವರ ಪತ್ನಿಗೆ ಮನಸೋ ಇಚ್ಛೆ ಬೈದಿದ್ದಾನೆ.

ಕೋಲ್ಕತ್ತಾಗೆ ತೆರಳುವ ಸಲುವಾಗಿ ಕಾರಿನಲ್ಲಿ ಏರ್‌ಪೋರ್ಟ್‌ ಹೋಗುತ್ತಿದ್ದಾಗ, ಹಿಂದಿನಿಂದ ಬಂದ ಬೈಕ್ ಸವಾರನೊಬ್ಬ ಬೋಸ್‌ ಅವರ ಜೊತೆಗೆ ಜಗಳಕ್ಕೆ ಇಳಿದಿದ್ದಾನೆ. ಬೈಕ್‌ನಲ್ಲಿ ಕಾರಿಗೆ ಅಡ್ಡಹಾಕಿ ಅವಾಚ್ಯ ಶಬ್ದಗಳ ನಿಂದಿಸಿದ್ದಾನೆ ಎಂದು ಬೋಸ್ ಆರೋಪಿಸಿದ್ದಾರೆ. ಕಾರಿನಲ್ಲಿ ಡಿಆರ್‌ಡಿವೊ ಸ್ಟಿಕ್ಕರ್ ನೋಡಿ ಮತ್ತಷ್ಟು ಕೋಪಗೊಂಡು ಜಗಳ ಮುಂದುವರೆಸಿದ್ದಾನೆ. ಬೋಸ್‌ ಅವರಿಗೆ ಮಾತ್ರವಲ್ಲದೆ ಅವರ ಪತ್ನಿಗೂ ಗದರಿದ್ದಾನೆ. ಕಾ...