Bengaluru, ಮೇ 13 -- ಬೆಂಗಳೂರು: ಕ್ಯಾಬ್‌ ಚಾಲಕನೊಬ್ಬ ಸುಖಾಸುಮ್ಮನೆ ಮಹಿಳೆಯೊಬ್ಬರನ್ನು ಪರಿಚಯ ಮಾಡಿಕೊಂಡಿದ್ದಾನೆ. ಆ ಪರಿಚಯದ ಪರಿಣಾಮ ತನ್ನ ಕುಟುಂಬ ನಿರ್ವಹಣೆಗೆ ಕಾರಣವಾಗಿದ್ದ ಕಾರನ್ನು ಕಳೆದುಕೊಂಡಿರುವ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ನಗರದ ಎಚ್‌ಎಂಟಿ ಲೇಔಟ್‌ ನಿವಾಸಿ ಕ್ಯಾಬ್‌ ಚಾಲಕ 39 ವರ್ಷದ ಅನಂತ ಕುಮಾರ್‌ ದೂರನ್ನು ಸಲ್ಲಿಸಿ ತಾನು ಆ ಮಹಿಳೆ ಹೆಣೆದ ಬಲೆಗೆ ಹೇಗೆ ಸಿಕ್ಕಿ ಬಿದ್ದೆ ಎಂದು ವಿವರಿಸಿದ್ದಾನೆ.

ಏಪ್ರಿಲ್‌ ಕೊನೆಯಲ್ಲಿ ಅನಂತ್‌ ಕುಮಾರ್‌ ಕಾರವಾರ ಪ್ರವಾಸಕ್ಕೆ ಪ್ರವಾಸಿಗರನ್ನು ಕರೆದೊಯ್ದಿದ್ದಾನೆ. ಬೀಚ್‌ ಹತ್ತಿರ ಅವರಿಗಾಗಿ ಕಾಯ್ದುಕೊಂಡು ಕಾರಿನಲ್ಲಿ ಕುಳಿತಿದ್ದಾನೆ. ಆಗ ಅಲ್ಲಿಗೆ ಆಗಮಿಸಿದ 20 ವರ್ಷದ ಯುವತಿಯೊಬ್ಬಳು ತನ್ನನ್ನು ಪರಿಚಯಿಸಿಕೊಂಡಿದ್ದಾಳೆ. ಹೀಗೆ ಮಾತನಾಡುತ್ತಿರುವಾಗ ಕಾರು ಚಾಲಕ ಬೆಂಗಳೂರಿನವ ಎಂಬುದನ್ನು ಯುವತಿ ತಿಳಿದುಕೊಂಡಿದ್ದಾಳೆ. ಬೆಂಗಳೂರಿನಿಂದ ಮೈಸೂರಿಗೆ ಹೋಗಬೇಕಿದ್ದು ನಿಮ್ಮ ಕಾರನ್ನೇ ಬುಕ್‌ ಮಾಡುವುದಾಗಿ ಹೇಳಿದ್ದಾಳೆ. ಇಬ್ಬರೂ ಪರಸ್ಪರ ಮೊಬೈಲ್‌ ನಂಬರ್‌ ಹಂಚಿಕ...