Bangalore, ಏಪ್ರಿಲ್ 22 -- ನಾಗ ಚೈತನ್ಯ ಮತ್ತು ಸಮಂತಾ ರುತ್‌ ಪ್ರಭು ಡಿವೋರ್ಸ್‌ಗೆ ಏನು ಕಾರಣ ಎಂಬ ವಿವರ ಇನ್ನೂ ಯಾರಿಗೂ ತಿಳಿದಿಲ್ಲ. ಆದರೆ, ಸಮಂತಾ ರುತ್‌ ಪ್ರಭುವಿಗೆ ಮೆಯೋಸಿಸ್‌ ಎಂಬ ಕಾಯಿಲೆ ಇದ್ದ ಸಂಗತಿ ಎಲ್ಲರಿಗೂ ಗೊತ್ತು. ಈಕೆಗೆ ಇಂತಹ ಅಪರೂಪದ ಕಾಯಿಲೆ ಇರುವುದೇ ಡಿವೋರ್ಸ್‌ಗೆ ಕಾರಣವಾಗಿರಬಹುದೇ? ಇತ್ತೀಚೆಗೆ ಸಮಂತಾ ಸೋಷಿಯಲ್‌ ಮೀಡಿಯಾದಲ್ಲಿ ವೈ ಮೆನ್‌ಲೀವ್‌ ಸಿಕ್‌ ಪಾಟ್ನರ್ಸ್‌ ಎಂಬ ಪೋಸ್ಟ್‌ ಲೈಕ್‌ ಮಾಡಿದ್ದಾರೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಸಮಂತಾ ರುತ್ ಪ್ರಭು ಅವರ ಇತ್ತೀಚಿನ ಸೋಷಿಯಲ್‌ ಮೀಡಿಯಾ ಆಕ್ಟಿವಿಟಿಯೊಂದು ಆಕೆಯ ಮಾಜಿ ಪತಿ ನಾಗ ಚೈತನ್ಯ ಅವರೊಂದಿಗಿನ ಹಿಂದಿನ ಸಂಬಂಧದ ಕುರಿತಾದ ಊಹಾಪೋಹಗಳಿಗೆ ಕಾರಣವಾಗಿದೆ. ನಟಿ ವಿಚ್ಛೇದನದ ನಂತರ ಅಪರೂಪದ ಕಾಯಿಲೆಯಾದ ಮಯೋಸಿಟಿಸ್‌ನಿಂದ ಬಳಲುತ್ತಿರುವುದನ್ನು ಬಹಿರಂಗಪಡಿಸಿದ್ದರು. ಈಗ, ಪುರುಷರು ಅನಾರೋಗ್ಯ ಪೀಡಿತ ಪಾಲುದಾರರನ್ನು ಏಕೆ ಬಿಡುತ್ತಾರೆ ಎಂಬುದನ್ನು ಚರ್ಚಿಸುವ ಪೋಸ್ಟ್ ಅವರ ಗಮನ ಸೆಳೆದಿದೆ. ಈ ಪೋಸ್ಟ್‌ ಅನ್ನು ಇವರು ಲೈಕ್‌ ಮಾಡಿದ್ದಾ...