ಭಾರತ, ಮೇ 12 -- ಬೆಂಗಳೂರು: ಕಾಮಿಡಿ ಸ್ಟಾರ್ ರಾಕೇಶ್ ಪೂಜಾರಿ ಇನ್ನಿಲ್ಲ. ವಿಶ್ವರೂಪ್ ಎಂದೇ ಜನಪ್ರಿಯರಾಗಿರುವ ಕಾಮಿಡಿ ಕಿಲಾಡಿಗಳು ವಿಜೇತ, ಉಡುಪಿ ಮೂಲದ ರಾಕೇಶ್ ಪೂಜಾರಿ ಇಂದು ಮುಂಜಾನೆ ವಿಧಿವಶರಾಗಿದ್ದಾರೆ. ಹಾಸ್ಯ ಕಲಾವಿದ, ನಟ ಶಿವರಾಜ್ ಕೆಆರ್ ಪೇಟೆ ಇಂದು (ಮೇ 12) ಬೆಳ್ಳಂ ಬೆಳಗ್ಗೆಯೇ ಈ ಸುದ್ದಿ ಪ್ರಕಟಿಸಿದ್ದು, "ಎಷ್ಟೋ ಮನಸುಗಳ ನಗಿಸಿದ ಆತ್ಮಕ್ಕೆ ಹೇಗೆ ಶಾಂತಿ ಕೋರಲಿ" ಎಂದು ಫೇಸ್‌ಬುಕ್ ಪೋಸ್ಟ್ ಹಾಕಿಕೊಂಡಿದ್ದಾರೆ. ಅನೇಕರಿಗೆ ಇದು ಆಘಾತ ಉಂಟುಮಾಡಿದ್ದು, ರಾಕೇಶ್ ಪೂಜಾರಿ ಅವರಿಗೆ ಏನಾಯಿತು ಎಂಬ ಪ್ರಶ್ನೆ ಕಾಡಿದೆ.
ಹಿಂದೂಸ್ತಾನ್ ಟೈಮ್ಸ್ ಕನ್ನಡದ ಜತೆಗೆ ಮಾತನಾಡಿದ ಶಿವರಾಜ್ ಕೆಆರ್ ಪೇಟೆ, ರಾಕೇಶ್ ಪೂಜಾರಿ ಅವರಿಗೆ ರಾತ್ರಿ ವೇಳೆ ದಿಢೀರ್ ಲೋ ಬಿಪಿ ಸಮಸ್ಯೆ ಕಾಡಿದೆ. ಪಲ್ಸ್ ರೇಟ್ ಕಡಿಮೆಯಾಗಿದೆ. ಕೂಡಲೇ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು. ಕೆಲವು ದಿನಗಳಿಂದ ನಾವು ಸಂಪರ್ಕದಲ್ಲಿ ಇರಲಿಲ್ಲ. ಆದರೆ ಈ ಸುದ್ದಿ ಆಘಾತವನ್ನು...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.