ಭಾರತ, ಮಾರ್ಚ್ 5 -- ಗುವಾಹಟಿಯಲ್ಲಿರುವ ಕಾಮಾಕ್ಯ ದೇವಸ್ಥಾನಕ್ಕೆ ನಟ ದರ್ಶನ್‌ ಪತ್ನಿ ಭೇಟಿ ನೀಡಿದ್ದು, ಈ ಸಂದರ್ಭದ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಸ್ಸಾಂ ರಾಜ್ಯದ ಈ ಕಾಮಾಕ್ಯ ದೇವಾಲಯವನ್ನು ಭೂಮಿಕಾ ಮೇಲಿನ 51 ಶಕ್ತಿ ಪೀಠಗಳಲ್ಲಿ ಅತ್ಯಂತ ಪವಿತ್ರ ಮತ್ತು ಅತ್ಯಂತ ಹಳೆಯದು ಎಂದು ಪರಿಗಣಿಸಲಾಗಿದೆ. ರೇಣುಕಾಸ್ವಾಮಿ ಹತ್ಯೆ ಸಮಯದಲ್ಲಿ ದರ್ಶನ್‌ ಬಂಧನವಾದ ಸಂದರ್ಭದಲ್ಲಿಯೂ ವಿಜಯಲಕ್ಷ್ಮಿ ಈ ದೇಗುಲಕ್ಕೆ ಭೇಟಿ ನೀಡಿ ಕಾಮಾಕ್ಯ ದೇವಿಗೆ ಪೂಜೆ ಸಲ್ಲಿಸಿದ್ದರು. ಈಗ ದರ್ಶನ್‌ ಜೈಲಿನಿಂದ ಹೊರಗಿದ್ದಾರೆ. ಈ ಸಂದರ್ಭದಲ್ಲಿ ಶಕ್ತಿಪೀಠಕ್ಕೆ ಭೇಟಿ ನೀಡಿ ದೇವಿ ದರ್ಶನ ಮಾಡಿದ್ದಾರೆ.

ವಿಜಯಲಕ್ಷ್ಮಿ ಆಗಾಗ ಕಾಮಾಕ್ಯ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ಸದ್ಯ ಹಂಚಿಕೊಂಡಿರುವ ಫೋಟೋಗಳಲ್ಲಿ ದೇವಾಲಯದ ಚಿತ್ರ, ದೇವಾಲಯದ ಮುಂದೆ ತಾನು ನಿಂತಿರುವ ಚಿತ್ರ ಮಾತ್ರವಲ್ಲದೆ, ಮಣ್ಣಿನ ಕಪ್‌ನಲ್ಲಿ ಕುಡಿಯುತ್ತಿರುವ ಟೀ ಫೋಟೋವನ್ನೂ ಹಂಚಿಕೊಂಡಿದ್ದಾರೆ. ದೇವಾಲಯಕ್ಕೆ ಭೇಟಿ ನೀಡಿದ ದಿನಾಂಕ ಮತ್ತು ಇತರೆ ಮಾ...