ಭಾರತ, ಏಪ್ರಿಲ್ 8 -- After 2nd PUC Commerce Best Course: ಇಂದು (ಏಪ್ರಿಲ್‌ 08) ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿತು. ಪಿಯುಸಿಯಲ್ಲಿ ವಿವಿಧ ವಿಭಾಗಗಳನ್ನು ಆಯ್ಕೆ ಮಾಡಿಕೊಂಡವರು ಮುಂದೇನು ಎಂಬ ಗೊಂದಲಕ್ಕೆ ಸಿಲುಕುವುದು ಸಹಜ. ಇದಕ್ಕೆ ಕಾಮರ್ಸ್ ವಿಭಾಗದ ವಿದ್ಯಾರ್ಥಿಗಳು ಹೊರತೇನಲ್ಲ. ಪಿಯುಸಿ ಕಾಮರ್ಸ್‌ ವಿಭಾಗ ಆಯ್ಕೆ ಮಾಡಿಕೊಂಡಿದ್ದು, ಮುಂದೆ ಯಾವ ಕೋರ್ಸ್‌ ಮಾಡುವುದು ಎಂಬ ಚಿಂತೆ ನಿಮ್ಮನ್ನು ಕಾಡುತ್ತಿದ್ದರೆ ಅದರ ಚಿಂತೆ ಬಿಡಿ. ಆದರೆ ಕಾಮರ್ಸ್‌ ಮಾಡಿದವರಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಹತ್ತು ಹಲವು ಕೋರ್ಸ್‌ಗಳಿವೆ. ಇವರು ಕೇವಲ ಕಾಮರ್ಸ್‌ ಮಾತ್ರವಲ್ಲ, ಇವರ ಅಭಿರುಚಿಗೆ ತಕ್ಕಂತಹ ಕೋರ್ಸ್‌ ಆರ್ಟ್ಸ್‌ನಲ್ಲಿದ್ದರೂ ಅದಕ್ಕೆ ಸೇರಬಹುದು.

ಕಾಮರ್ಸ್‌ನ ವ್ಯಾಪ್ತಿಯು ವ್ಯಾಪಾರ, ಹಣಕಾಸು, ಲೆಕ್ಕಪತ್ರ ನಿರ್ವಹಣೆ, ಅರ್ಥಶಾಸ್ತ್ರ, ನಿರ್ವಹಣೆ ಮತ್ತು ಮಾರುಕಟ್ಟೆಯಂತಹ ಕ್ಷೇತ್ರಗಳನ್ನು ಒಳಗೊಂಡಿದೆ. ವಾಣಿಜ್ಯ ವಿದ್ಯಾರ್ಥಿಗಳು ಬ್ಯಾಂಕಿಂಗ್, ಚಿಲ್ಲರೆ ಮತ್ತು ಇ-ಕಾಮರ್ಸ್‌ನಂತಹ ಕ್ಷೇತ್ರಗಳಲ್ಲಿ ವೈವಿಧ್ಯಮಯ ಅವಕ...