ಭಾರತ, ಮಾರ್ಚ್ 5 -- Amruthadhaare: ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ಖ್ಯಾತಿಯ ಅಮೃತಧಾರೆ ಧಾರಾವಾಹಿಯ ಇತ್ತೀಚಿನ ಎಪಿಸೋಡ್‌ಗಳ ಕುರಿತು ಜನರ ಆಕ್ರೋಶ ಕಟ್ಟೆಯೊಡೆದಿದೆ. ಭೂಮಿಕಾ ಎಂಬ ಸ್ಟ್ರಾಂಗ್‌ ಕ್ಯಾರೆಕ್ಟರ್‌ ಅನ್ನು ದುರ್ಬಲವಾಗಿಸಿ, ಆಕೆಯ ಕೈಯಿಂದಲೇ ಗೌತಮ್‌ಗೆ ಇನ್ನೊಂದು ಮದುವೆ ಮಾಡಿಸುವ ಕಥೆಯನ್ನು ಒಪ್ಪಲು ಯಾರೂ ರೆಡಿ ಇಲ್ಲ. ಮದುವೆಯಾಗಿ ಮಕ್ಕಳಾಗದೆ ಇದ್ದಾಗ ಇನ್ನೊಂದು ಮದುವೆ ಮಾಡುವುದೇ ಎಂದು ಎಲ್ಲರೂ ಪ್ರಶ್ನಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಕವಿಯತ್ರಿ, ವಿಮರ್ಶಕಿ ಅಕ್ಷತಾ ಹುಂಚದಕಟ್ಟೆ ಅಮೃತಧಾರೆ ಧಾರಾವಾಹಿಯ ಕುರಿತು ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ಅಕ್ಷತಾ ಹೀಗೆ ಬರೆದಿದ್ದಾರೆ.

"ಅವನು ಮದ್ವೆನೇ ಬೇಡ ಅಂತಿದ್ದ, ನೂರಾರು ಕೋಟಿ ಒಡೆಯ ಬ್ಯುಸಿನೆಸ್ ಟೈಕೂನ್. ವಯಸ್ಸು 45 ದಾಟಿತ್ತು. ಇಡೀ ಬದುಕನ್ನು ಚಿಕ್ಕ ತಮ್ಮ ತಂಗಿಯರ ಬದುಕಿಗೆ ಮೀಸಲಿಟ್ಟಿದ್ದ. ಯಾಕೆಂದರೆ ಅವನ ಅಪ್ಪ ವೃದ್ದಾಪ್ಯಾದಲ್ಲಿ ಎರಡನೇ ಮದುವೆಯಾಗಿ, ಇವನಿಗೆ ಮಲತಾಯಿ ತಂದು ಜೊತೆಗೆ ನಾಲ್ಕು ಮಕ್ಕಳು ಹುಟ...