Bengaluru, ಮಾರ್ಚ್ 6 -- ಕರ್ನಾಟಕದ ಕರಾವಳಿ ಜಿಲ್ಲೆಯಲ್ಲಿ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ನಿರ್ಮಾಣವಾಗಿದ್ದು, ಬ್ರಹ್ಮಕಲಶ ಕಾರ್ಯಕ್ರಮ ವೈಭವದಿಂದ ನಡೆದಿದೆ. ಬುಧವಾರ ಈ ಕಾರ್ಯಕ್ರಮಗಳು ಸಂಪನ್ನಗೊಂಡಿವೆ. ಈ ಸಂದರ್ಭದಲ್ಲಿ ವಿವಿಧ ಬಾಲಿವುಡ್‌ ನಟಿ, ನಟರು ಹೊಸ ಮಾರಿಗುಡಿ ದೇವಸ್ಥಾನಕ್ಕೆ ಆಗಮಿಸಿದ್ದಾರೆ. ನಿನ್ನೆ ಬಾಲಿವುಡ್‌ ಬೆಡಗಿ ಪೂಜಾ ಹೆಗ್ಡೆ ಕೂಡ ಬ್ರಹ್ಮಕಲಶ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಮಾರಿಯಮ್ಮನ ಪ್ರತಿಷ್ಠ ಮಹೋತ್ಸವ, ಉಚ್ಛಂಗಿ ದೇವಿಯ ಬ್ರಹ್ಮಕಲಶೋತ್ಸವ ಶಾಸ್ತ್ರೋಕ್ತವಾಗಿ ನಡೆದಿದ್ದು, ದಕ್ಷಿಣ ಕನ್ನಡ, ಉಡುಪಿ ಮಾತ್ರವಲ್ಲದೆ ಕರ್ನಾಟಕ ಮತ್ತು ಹೊರರಾಜ್ಯಗಳಿಂದಲೂ ಭಕ್ತರು ಆಗಮಿಸಿದ್ದಾರೆ.

ಉಡುಪಿಯ ಕಾಪು ಮಾರಿಗುಡಿಯ ಬ್ರಹ್ಮಕಲಶೋತ್ಸವದಲ್ಲಿ ಪೂಜಾ ಹೆಗ್ಡೆ ಭಾಗವಹಿಸಿದ್ದಾರೆ. ಕುಟುಂಬದ ಜತೆ ಆಗಮಿಸಿ ದೇವಿಯ ದರ್ಶನ ಪಡೆದು ಪುನೀತರಾಗಿದ್ದಾರೆ. ಕರಾವಳಿ ಮೂಲದ ಪೂಜಾ ಹೆಗ್ಡೆ ಆಗಾಗ ಕರಾವಳಿಯ ದೇವಾಲಯಗಳಿಗೆ ಭೇಟಿ ನೀಡುತ್ತಿರುತ್ತಾರೆ. ನಿನ್ನೆ ಕುಟುಂಬ ಸಮೇತ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್...