Bangalore, ಮಾರ್ಚ್ 12 -- ಕಾಲಿವುಡ್‌ ನಟ ಧನುಷ್‌ ಮತ್ತು ನಯನತಾರ ಅವರ ಕಾಪಿರೈಟ್‌ ವಿವಾದ ಪ್ರಕರಣ ಮತ್ತೆ ಸುದ್ದಿಯಲ್ಲಿದೆ. ಧನುಷ್‌ ಮಾಲಿಕತ್ವದ ವುಂಡರ್‌ಬಾರ್‌ ಫಿಲ್ಮ್ಸ್‌ ಪ್ರೈವೇಟ್‌ ಲಿಮಿಟೆಡ್‌ ಇತ್ತೀಚೆಗೆ "ನಯನತಾರಾ: ಬಿಯಾಂಡ್ ದಿ ಫೇರಿಟೇಲ್"ನಲ್ಲಿ 'ನಾನುಮ್ ರೌಡಿ ಧಾನ್' ಸಿನಿಮಾದ ಬಿಟಿಎಸ್‌ ದೃಶ್ಯಗಳನ್ನು ಬಳಸಿದ್ದಕ್ಕೆ ಒಂದು ಕೋಟಿ ರೂಪಾಯಿ ಪರಿಹಾರ ಕೇಳಿದೆ. ಇದರೊಂದಿಗೆ ಈ ಬಯೋಪಿಕ್‌ಗೆ ಶಾಶ್ವತ ತಡೆಯಾಜ್ಞೆಯನ್ನೂ ಕೇಳಿದೆ. ವರದಿಗಳ ಪ್ರಕಾರ ಸುಮಾರು ಮೂರು ಸೆಕೆಂಡಿನ ವಿಡಿಯೋ ಬಳಸಿದ್ದಕ್ಕೆ 1 ಕೋಟಿ ಪರಿಹಾರ ಕೇಳಲಾಗಿದೆ.

ವುಂಡರ್‌ಬಾರ್‌ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಹಲವು ವಿವರಗಳು ಇವೆ. 'ನಾನುಮ್ ರೌಡಿ ಧಾನ್' ಶೂಟಿಂಗ್‌ ಸಮಯದಲ್ಲಿ ವಿಘ್ನೇಶ್‌ ಶಿವನ್‌ ಅವರು ವೃತ್ತಿಪರವಾಗಿ ವರ್ತಿಸಿಲ್ಲ. ಈಗ ಒಂದು ಕೋಟಿ ರೂಪಾಯಿ ಪರಿಹಾರವನ್ನು ಮತ್ತು ಈ ಸಾಕ್ಷ್ಯಚಿತ್ರ ಪ್ರಸಾರಕ್ಕೆ ಶಾಶ್ವತವಾದ ತಡೆಯಾಜ್ಞೆ ನೀಡಬೇಕೆಂದು ಕೋರಲಾಗಿದೆ.

ನ್ಯಾಯಮೂರ್ತಿ ಸೆಂಥಿಲ್‌ಕುಮಾರ್ ರಾಮಮೂರ್ತಿ ಅವರು ಸಾಕ್ಷ್ಯಚಿತ್ರ ಪ...