Mysuru,kodagu, ಏಪ್ರಿಲ್ 3 -- ಮೈಸೂರು: ಇದೊಂದು ರೀತಿ ವಿಭಿನ್ನ ತಿರುವು ಪಡೆಯುವ ಚಲನಚಿತ್ರದ ಕಥೆಯನ್ನೇ ಹೋಲುವಂತಿದೆ. ಇದು ನಡೆದಿರುವುದು ಮೈಸೂರು ಹಾಗೂ ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿ. ಪತ್ನಿ ಕಾಣೆಯಾದಳು ಎಂದು ದೂರು ನೀಡಿದ್ದ ವ್ಯಕ್ತಿಯೇ ಆಕೆಯನ್ನು ಕೊಲೆ ಮಾಡಿದ್ದಾಳೆ ಎಂದು ಮೈಸೂರು ಜಿಲ್ಲೆ ಬೆಟ್ಟದಪುರ ಪೊಲೀಸರು ವ್ಯಕ್ತಿಯನ್ನು ಬಂಧಿಸಿ ಎರಡು ವರ್ಷ ಜೈಲು ವಾಸ ಅನುಭವಿಸುವಂತೆ ಮಾಡಿದ್ದರು. ಜೈಲು ವಾಸ ಮುಗಿಸಿ ಬಂದ ವ್ಯಕ್ತಿಗೆ ತನ್ನ ಪತ್ನಿಯೇ ಕಂಡಾಗ ಹೇಗಿರಬೇಡ. ಕಾಣೆಯಾಗಿದ್ದ ಪತ್ನಿ ನಾಲ್ಕೂವರೆ ವರ್ಷದ ನಂತರ ಪತಿಗೆ ಸಿಕ್ಕಿಬಿದ್ದಿದ್ದು, ತಾನು ಕೊಲೆ ಮಾಡಿಲ್ಲ ಎಂದರೂ ಹೇಳಿಕೆಗೆ ಅವಕಾಶ ನೀಡದ ಪೊಲೀಸರ ನಡೆ ಬಗ್ಗೆಯೇ ಬಲವಾದ ಅನುಮಾನ ವ್ಯಕ್ತವಾಗಿವೆ. ಈಗ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರು ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮಾಡದ ತಪ್ಪಿಗೆ 2 ವರ್ಷ ಜೈಲು ಶಿಕ್ಷೆ ಅನುಭವಿಸಿದ ಅಮಾಯಕ ಪತಿ ಪೊಲೀಸರ ವಿರುದ್ದ ಕ್ರಮ ಕೈಗೊಳ್ಳವಂತೆ ಮನವಿ ಮಾಡಿದ್ದಾರೆ.

ಕೊಡಗು ಜಿಲ್ಲೆಯ ಕುಶಾ...