ಭಾರತ, ಮಾರ್ಚ್ 31 -- ದಕ್ಷಿಣ ಭಾರತ ಮುಖ್ಯವಾಗಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಕಾಡು ಗೊಲ್ಲರಹಟ್ಟಿಗಳಿವೆ. ಗೊಲ್ಲ ಸಮುದಾಯವು ಅರಣ್ಯದಲ್ಲಿ ವಾಸಿಸುತ್ತಿದ್ದು, ಜಾನುವಾರುಗಳೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿದ್ದಾರೆ. ಇತರೆ ಜಾತಿಗಳಿಂದ ಇವರು ಪ್ರತ್ಯೇಕವಾಗಿ ವಾಸಿಸುತ್ತಾರೆ. ಇದಕ್ಕೇನು ಕಾರಣ? ಎಂಬಿತ್ಯಾದಿ ಬಗ್ಗೆ ಕಾಂತರಾಜು ಕೆ ತಮ್ಮ ಫೇಸ್‌ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ. ಅವರ ಬರಹವನ್ನು ಯಥಾವತ್ತಾಗಿ ಇಲ್ಲಿ ಮರು ಪ್ರಕಟಿಸಲಾಗಿದೆ.

ಕಾಡು ಗೊಲ್ಲರಹಟ್ಟಿಗಳೆಂದರೇನು? ಗೊಲ್ಲರಹಟ್ಟಿಗಳೊಳಗೆ ಯಾಕಿಷ್ಟು ಬುಡಕಟ್ಟು ನಾಯಕರು ಪೂಜಿಸಲ್ಪಡುತ್ತಾರೆ? ಗೊಲ್ಲರಹಟ್ಟಿಗಳು ಇತರ ಜಾತಿಗಳಿಂದ ಪ್ರತ್ಯೇಕವಾಗಿ ಯಾಕೆ ವಾಸಿಸುತ್ತಾರೆ?

ಗೊಲ್ಲರಹಟ್ಟಿಗಳ ಬಗ್ಗೆ ನಾಗರಿಕ ಜಗತ್ತು ದಿಗ್ಗನೆದ್ದು ನೋಡಿ ದಿಗಿಲು ಬೀಳಲು ಹಲವಾರು ಕಾರಣಗಳಿವೆ. ಆಧುನಿಕ ಸಮಾಜಕ್ಕೆ ಅರ್ಥ ಮಾಡಿಕೊಳ್ಳಲು ಸಾಧ್ಯವೇ ಇಲ್ಲದ ಬುಡಕಟ್ಟು ಆಚರಣೆಗಳು ಈಗಲೂ ಆಚರಿಸಲ್ಪಡುತ್ತವೆ. ಇವರು ಮಧ್ಯ ಯುಗದ ಭರತ ಖಂಡದ ಬಹುಮುಖ್ಯ ಗೋಪಾಲಕರು. ಗೋವು...