Hassan, ಮಾರ್ಚ್ 27 -- ಕಾಡಿನ ಕಥೆಗಳು: ಹಾಸನದಲ್ಲಿ ಕಾಡಾನೆ ಹಾವಳಿ ಎಷ್ಟು ಮಿತಿ ಮೀರಿದೆ ಎಂದರೆ ಬೇಲೂರು, ಸಕಲೇಶಪುರ ತಾಲ್ಲೂಕು, ಆಲೂರು ಭಾಗದ ಅರಣ್ಯದಂಚಿನ ಜನ ಮನೆಯಿಂದ ಹೊರ ಬರಲು ಭಯ ಪಡುವ ಸನ್ನಿವೇಶ ನಿರ್ಮಾಣವಾಗಿದೆ. ಅರಣ್ಯ ಇಲಾಖೆಯವರು ಕಂಡರೆ ಸಾಕು ಜನ ಹೊಡೆಯುವ ಮಟ್ಟಿಗೆ ಪರಿಸ್ಥಿತಿ ಹೋಗಿದೆ. ಒಂದು ಕಡೆ ಕಾಡಾನೆಗಳ ಉಪಟಳ. ಮತ್ತೊಂದು ಕಡೆ ಅರಣ್ಯ ಇಲಾಖೆಯಲ್ಲಿಯೇ ಜವಾಬ್ದಾರಿ, ಯೋಜಿತವಾಗಿ ಕೆಲಸ ಮಾಡುವ ಅಧಿಕಾರಿಗಳ ಕೊರತೆ. ಡಿಸಿಎಫ್‌, ಎಸಿಎಫ್‌ಗಳ ಸಾಲು ಸಾಲು ಸಸ್ಪೆಂಡ್‌ ಪ್ರಕರಣಗಳ ನಂತರ ಹಾಸನದ ಅರಣ್ಯ ಇಲಾಖೆಗೆ ಒಬ್ಬ ಮೇಟಿ ಬೇಕಿದ್ದರು. ಮೂರು ತಿಂಗಳ ಹಿಂದೆ ಅರಣ್ಯ ಇಲಾಖೆಗೆ ಮೇಟಿಯೊಬ್ಬರನ್ನೇನೂ ಸರ್ಕಾರ ನೇಮಿಸಿತು. ಅವರು ಬಂದು ಅಧಿಕಾರ ಕೂಡ ವಹಿಸಿಕೊಂಡರು. ಮದುವೆಯಾಗಿ ಹನ್ನೊಂದು ವರ್ಷದ ಬಳಿಕ ಮನೆಯಲ್ಲಿ ಮಗು ಹುಟ್ಟುವ ಸಂಭ್ರಮ. ಹಾಸನಕ್ಕೆ ಬಂದ ಎರಡು ತಿಂಗಳಲ್ಲೇ ಜನಿಸಿದ್ದು ಅವಳಿ ಹೆಣ್ಣುಮಕ್ಕಳು. ಮನೆಗೆ ಮಹಾಲಕ್ಷ್ಮಿಯರೇ ಬಂದ ಖುಷಿ. ಊರಿಗೆ ಹೋಗಲು ಆಗದಷ್ಟು ಇಲ್ಲಿ ಕಾಡಾನೆ ಉಪಟಳ. ಎರಡು ತಿಂಗಳ ಅಂತರದಲ...