Bangalore, ಫೆಬ್ರವರಿ 5 -- ಅದು 1990 ರ ದಶಕ. ವನ್ಯಜೀವಿಗಳ ಮೇಲೆ ವಿಚಕ್ಷಣೆ ಇಡಲು ಕರ್ನಾಟಕದ ನಾಗರಹೊಳೆಯಲ್ಲಿ ರೇಡಿಯೋ ಕಾಲರ್‌ ಅನ್ನು ಮೊದಲು ಅಳವಡಿಸಿದವರು ತಜ್ಞ ಡಾ.ಉಲ್ಲಾಸ್‌ ಕಾರಂತ್‌. ಅದೂ ಮೊದಲ ಬಾರಿಗೆ ಹುಲಿಗೆ ರೇಡಿಯೋ ಕಾಲರ್‌ ಅಳವಡಿಸಿ ಆಂಟೆನಾ ಆಧರಿತವಾಗಿ ಹುಲಿಯ ನಿತ್ಯ ಆಗು ಹೋಗುಗಳನ್ನು ದಾಖಲು ಮಾಡಲಾಗುತ್ತಿತ್ತು. ಇದು ಆಗ ಭಾರೀ ವಿವಾದವನ್ನೂ ಸೃಷ್ಟಿಸಿತ್ತು. ವಿದೇಶದಿಂದ ಹಣ ತಂದು ನಮ್ಮ ಅರಣ್ಯದಲ್ಲಿ ಪ್ರಯೋಗ ಮಾಡುವುದು ಏನಿದೆ ಎನ್ನುವುದು ವಿವಾದದ ಮೂಲವಾಗಿತ್ತು. ಆಗ ಅರಣ್ಯ ಸಚಿವರಾಗಿದ್ದ ಬಿ.ಬಸವಲಿಂಗಪ್ಪ ಅವರೂ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಕೆಲ ಪರಿಸರವಾದಿಗಳಿಂದಲೂ ಇದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಆದರೂ ಉಲ್ಲಾಸ್‌ ಕಾರಂತ್‌ ಮೊದಲ ರೇಡಿಯೋ ಕಾಲರ್‌ ಅನ್ನು ಅಳವಡಿಸಿ ವೈಜ್ಞಾನಿಕವಾಗಿ ಕರ್ನಾಟಕ ಮುಂದೆ ಇದೆ ಎನ್ನುವುದನ್ನು ತೋರಿಸಿಕೊಟ್ಟಿದ್ದರು. ನಾಲ್ಕೈದು ವರ್ಷಗಳ ಕಾಲ ಗೊಂದಲ, ವಿವಾದದ ನಡುವೆಯೂ ಹುಲಿಗಳಿಗೆ ರೇಡಿಯೋ ಕಾಲರಿಂಗ್‌ ಹಾಕುವ ಪ್ರಯೋಗ ಮುಂದುವರಿದಿತ್ತು. ದಶಕಗಳು ಉರುಳಿ ಹೋ...