Gadag, ಮಾರ್ಚ್ 18 -- ಕಾಡಿನ ಕಥೆಗಳು: ಅವರು ಭಾರೀ ಧೈರ್ಯವಿದ್ದ ರಾಜಕಾರಣಿ. ಅದರಲ್ಲೂ ಸಚಿವರಾಗಿ ಕರ್ನಾಟಕದಲ್ಲಿ ಅರಣ್ಯ ಉಳಿಸುವಲ್ಲಿ ಅವರ ಪಾತ್ರ ಬಹು ದೊಡ್ಡದು. ಎಲ್ಲರ ಅಭಿಪ್ರಾಯ ಕೇಳೋರು. ಕೊನೆಗೆ ಖಚಿತ ನಿರ್ಧಾರ ತೆಗೆದುಕೊಳ್ಳೋರು. ಅವರು ಯಾರದ್ದೇ ಜತೆಗೆ ವಿಚಾರ ಭಿನ್ನಾಭಿಪ್ರಾಯ ಹೊಂದಿದ್ದರೂ ಅದು ನಾಡಿನ ಹಿತಕ್ಕೆ ಎನ್ನುವ ರೀತಿ ಇರುತ್ತಿತ್ತು. ಅರಣ್ಯ ಇಲಾಖೆಯ ಅಧಿಕಾರಿಗಳಾಗಿ ಅವರ ಕೆಲವೊಂದು ಕಾರ್ಯಕ್ರಮ, ಯೋಜನೆಗಳನ್ನು ನಾವು ವಿರೋಧಿಸಿದರೂ ಅದರ ಸದುದ್ದೇಶದಿಂದ ಸೂಕ್ತ ಬದಲಾವಣೆಯೊಂದಿಗೆ ಜಾರಿ ಮಾಡಬಹುದು ಎಂದು ಹೇಳುತ್ತಿದ್ದೆವು. ಅದನ್ನು ಅಷ್ಟೇ ಗೌರವಯುತವಾಗಿ ಸ್ವೀಕರಿಸುತ್ತಿದ್ದ ಅಪ್ರತಿಮ ರಾಜಕಾರಣಿ ಅವರು, ಕರ್ನಾಟಕ ಮಾತ್ರವಲ್ಲ. ಭಾರತ ಕಂಡ ಒಬ್ಬ ಅಪ್ರತಿಮ ಸಚಿವರು ಹಾಗೂ ಅರಣ್ಯ ಸಚಿವರು ಅವರು. ಅವರ ಸೇವೆಯನ್ನು ಎಂದಿಗೂ ಮರೆಯಲಾಗದು.

ಹೀಗೆ ಕರ್ನಾಟಕದ ಹಿರಿಯ ರಾಜಕಾರಣಿ, ಗದುಗಿನ ಹುಲಕೋಟಿ ಹುಲಿ ಎಂದೇ ಹೆಸರಾಗಿದ್ದ ಕೃಷ್ಣಗೌಡ ಹನುಮಂತಗೌಡ ಪಾಟೀಲ( ಕೆಎಚ್‌ ಪಾಟೀಲ) ಅವರ ಬಗ್ಗೆ ಹೇಳುತ್ತಿದ್ದರೆ ಕರ್ನಾಟಕದ ...