Bangalore, ಫೆಬ್ರವರಿ 5 -- ಬೆಂಗಳೂರು: ಕಾಟೇರ ಸಿನಿಮಾದ ಟಿಕೆಟ್‌ ಮಾರಾಟವು ಕೇವಲ ಬುಕ್‌ಮೈಶೋ ಮೂಲಕವೇ ಒಂದು ದಶಲಕ್ಷಕ್ಕೆ ತಲುಪಿದ್ದು, ಹೊಸ ದಾಖಲೆ ಸೃಷ್ಟಿಸಿದೆ ಎಂಬ ವಿಚಾರವೂ ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಆಗುತ್ತಿದೆ. ಈ ರೀತಿಯ ದಾಖಲೆ ಬರೆದ ಮೊದಲ ಪ್ರಾದೇಶಿಕ ಕನ್ನಡ ಸಿನಿಮಾ ಎನ್ನಲಾಗುತ್ತಿದೆ. ಬುಕ್‌ ಮೈ ಶೋ ಆಪ್‌/ವೆಬ್‌ ಮೂಲಕ ಟಿಕೆಟ್‌ ಖರೀದಿಸಿದ ದಾಖಲೆಯ ಲೆಕ್ಕಾಚಾರ ಇದೆಂದು ಹೇಳಲಾಗಿದೆ.

ಈ ಕುರಿತಂತೆ ದರ್ಶನ್‌ ಟ್ರೆಂಡ್ಸ್‌ ಎಕ್ಸ್‌ ಹ್ಯಾಂಡಲ್‌ನಲ್ಲಿ ಪೋಸ್ಟ್‌ ಮಾಡಲಾಗಿದ್ದು, ದರ್ಶನ್‌ ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ. ಈ ಟ್ವಿಟ್ಟರ್‌ ಪೋಸ್ಟ್‌ ಅನ್ನು ರಾಕ್‌ಲೈನ್‌ ಎಂಟರ್‌ಟೇನ್ಮೆಂಟ್‌, ಆನಂದ್‌ ಆಡಿಯೋ ಲೋಗೊದ ಜತೆ ಹಂಚಿಕೊಳ್ಳಲಾಗಿದೆ.

"ಕಾಟೇರ ಸಿನಿಮಾವು ಬುಕ್‌ಮೈಶೋ ಟಿಕೆಟ್‌ ಮಾರಾಟದಲ್ಲಿ 1 ಮಿಲಿಯನ್‌ಗೆ ತಲುಪಿದೆ. ಈ ಮೂಲಕ ಪ್ರಾದೇಶಿಕ ಕನ್ನಡ ಸಿನಿಮಾವು ಇದೇ ಮೊದಲ ಬಾರಿಗೆ ಈ ಹಂತ ತಲುಪಿದ ಹೆಮ್ಮೆಗೆ ಪಾತ್ರವಾಗಿದೆ. ಆನ್‌ಲೈನ್‌ ಬಾಕ್ಸ್‌ ಆಫೀಸ್‌ನಲ್ಲೂ ಸುಲ್ತಾನ್‌ ಮುಂದಿದ್ದಾನೆ" ಎಂ...