ಭಾರತ, ಮಾರ್ಚ್ 11 -- ಕಾಟನ್ ಚೂಡಿದಾರ್ ನೆಕ್‌ಲೈನ್:ಬೇಸಿಗೆ ಆರಂಭವಾಗಿದ್ದು,ಹೆಚ್ಚಿನ ಮಹಿಳೆಯರು ದಿನನಿತ್ಯದ ಬಳಕೆಗಾಗಿ ಸರಳವಾದ ಕಾಟನ್ ಕುರ್ತಾ ಅಥವಾ ಚೂಡಿದಾರ್ ಧರಿಸಲು ಇಷ್ಟಪಡುತ್ತಾರೆ. ನೀವು ಕಾಟನ್ ಡ್ರೆಸ್ ಮೆಟೀರಿಯಲ್ ಖರೀದಿಸಿದ್ದರೆ, ನೀರಸವಾಗಿ ಹೊಲಿಸುವ ಬದಲು ಈ ನೆಕ್‌ಲೈನ್ ವಿನ್ಯಾಸಗಳನ್ನು ಪ್ರಯತ್ನಿಸಿ. ಇದರಿಂದ ಸರಳವಾದ ಕುರ್ತಾವನ್ನು ಸಹ ಸ್ಟೈಲಿಶ್ ಆಗಿ ಮಾಡಬಹುದು. ಈ ಇತ್ತೀಚಿನ ಮತ್ತು ಆಧುನಿಕ ವಿನ್ಯಾಸದ ನೆಕ್ ಡಿಸೈನ್‌ಗಳು ಇಲ್ಲಿವೆ. ಕುರ್ತಾ ಸರಳವಾಗಿದ್ದರೂ ಸ್ಟೈಲಿಶ್ ಲುಕ್ ಕೊಡುತ್ತದೆ.

ಕಾಲರ್ ವಿನ್ಯಾಸ:ಕುರ್ತಾದಲ್ಲಿ ಕಾಲರ್ ವಿನ್ಯಾಸ ಮಾಡುವುದೇನು ಹೊಸ ಟ್ರೆಂಡ್ ಅಲ್ಲ. ಆದರೆ ಈ ಕಾಲರ್‌ನ ದುಂಡಗಿನ ಆಕಾರ ಮತ್ತು ಅದರ ಮೇಲಿನ ಕಸೂತಿ ಕುರ್ತಾಗೆ ವಿಶಿಷ್ಟ ನೋಟವನ್ನು ನೀಡುತ್ತಿದೆ. ಇದನ್ನು ದಿನನಿತ್ಯದ ಕುರ್ತಾದ ಮೇಲೆ ಹೊಲಿಸಬಹುದು. ಟ್ರೆಂಡಿ ಲುಕ್ ನೀಡುತ್ತದೆ.

ಪ್ರಿನ್ಸೆಸ್ ಕಟ್ ವಿತ್ ಪ್ಲೀಟ್ಸ್:ಕುರ್ತಾ ಆಗಿರಲಿ ಅಥವಾ ಬ್ಲೌಸ್ ಆಗಿರಲಿ, ಪ್ರಿನ್ಸೆಸ್ ಕಟ್ ನೆಕ್‌ಲೈನ್ ಎಲ್ಲದರಲ್ಲೂ ಸುಂದರವಾಗಿ ಕ...