Bangalore, ಏಪ್ರಿಲ್ 15 -- ಕಾಂತಾರ ಸಿನಿಮಾದ ಮೂಲಕ ಜಗತ್ತಿನ ಗಮನ ಸೆಳೆದ ರಿಷಬ್‌ ಶೆಟ್ಟಿ ಹೊಸದೊಂದು ಕಾರು ಖರೀದಿಸಿದ್ದಾರೆ. ಆ ಕಾರಿನ ಹೆಸರು ಟೊಯೊಟಾ ವೆಲ್‌ಫೈರ್‌. ಐಷಾರಾಮಿ, ಆರಾಮದಾಯಕ ಫೀಚರ್‌ಗಳನ್ನು ಹೊಂದಿರುವ ಈ ಕಾರಿನ ಇತ್ತೀಚಿನ ಆವೃತ್ತಿಯ ಆನ್‌ರೋಡ್‌ ದರ 1.50 ಕೋಟಿ ರೂಪಾಯಿ ಆಸುಪಾಸಿನಲ್ಲಿದೆ.

ಹೊಸ ಕಾರಿನ ಮುಂದೆ ನಿಂತು ರಿಷಬ್‌ ಶೆಟ್ಟಿ ಮತ್ತು ಅವರ ಪತ್ನಿ ಪ್ರಗತಿ ಶೆಟ್ಟಿ ಹಾಗೂ ಮಕ್ಕಳು ಪೋಸ್‌ ನೀಡಿದ್ದಾರೆ. ಈ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ನ್ಯೂ ವೆಲ್‌ಫೈರ್‌ ದರವೆಷ್ಟು?: ಟೊಯೊಟಾ ಕಂಪನಿಯ ವೆಲ್‌ಫೈರ್‌ ಕಾರಿನ ಇತ್ತೀಚಿನ ಆವೃತ್ತಿಗೆ ನ್ಯೂ ವೆಲ್‌ಫೈರ್‌ ಎನ್ನುತ್ತಾರೆ. ಇದರ ಟಾಪ್‌ ಎಂಡ್‌ ಆವೃತ್ತಿಯ ಎಕ್ಸ್‌ ಶೋರೂಂ ದರ ಕರ್ನಾಟಕದಲ್ಲಿ 1.32 ಕೋಟಿ ರೂಪಾಯಿ ಇದೆ. ಆನ್‌ರೋಡ್‌ ದರ 1.50 ಕೋಟಿ ರೂಪಾಯಿ ದಾಟಬಹುದು.

ಟೊಯೊಟಾ ವೆಲ್‌ಫೈರ್‌ ವಿಶೇಷಗಳೇನು?: ಇದರಲ್ಲಿರುವ ಹತ್ತು ಹಲವು ವಿಶೇಷಗಳಲ್ಲಿ ಕೆಲವೊಂದು ಫೀಚರ್‌ಗಳನ್ನು ಈ ಮುಂದಿನಂತೆ ತಿಳಿಸಬಹುದು. ಕಂಫರ್ಟ್‌: ಲೆದರ್‌ ಫಿನ...